

ಕಲಬುರಗಿ: ದೇಶದಲ್ಲಿ ಆಶಾ ಕಾರ್ಯಕರ್ತೆಯರ ನೇಮಕಕ್ಕೆ ಮುನ್ನ ಒಂದು ಲಕ್ಷಕ್ಕೆ ಐದು ಸಾವಿರ ಮಕ್ಕಳು ಮೃತಪಡುತ್ತಿದ್ದರು. ಅದನ್ನು ನಿಯಂತ್ರಿಸಿದವರು ಆಶಾಗಳು. ಹಗಲಿರುಳು ಸಮಾಜದ ಸ್ವಾಸ್ಥÈಕ್ಕಾಗಿ ದುಡಿಯುತ್ತಿರುವ ಆಶಾಗಳನ್ನು ಕಾಯಂ ನೌಕರರನ್ನಾಗಿ ಪರಿಗಣಿಸಬೇಕು, ಕನಿಷ್ಠ ೧೫ ಸಾವಿರ ರೂ. ವೇತನ ನೀಡಬೇಕು ಎಂದು ಎಸ್‌ಯುಸಿಐ (ಸಿ) ರಾಜ್ಯ ಕಾರ್ಯದರ್ಶಿ ಕೆ.ಉಮಾ ಆಗ್ರಹಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದ ಎದುರಿನ ಆವರಣದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಎಐಯುಟಿಯುಸಿಯಿಂದ ಶುಕ್ರವಾರ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರ ಪ್ರಥಮ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವ ಮುನ್ನ ಆಶಾ ವೇತನ ಹೆಚ್ಚಿಸುವ ಗ್ಯಾರಂಟಿ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಮರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ ೬ಕ್ಕೆ ಕೆಲಸ ಆರಂಭಿಸಿ ಇಡೀ ದಿನ ಚಾಕರಿ ಮಾಡುವ ಆಶಾಗಳಿಗೆ ಕನಿಷ್ಠ ೩೦ ಸಾವಿರ ಕೊಡಬೇಕು. ಆದರೆ ನಾವು ಕೇಳುತ್ತಿರುವುದು ೧೫-೧೮ ಸಾವಿರ ರೂ. ಮಾತ್ರ. ೧೦ ವರ್ಷದಿಂದ ಟಾಟಾ, ಅಂಬಾನಿಗಳ ೫೫ ಲP್ಷÀ ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದರು.
ಮೆಡಿಕಲ್ ಸರ್ವಿಸ್ ಸೆಂಟರ್‌ನ ಅಖಿಲ ಭಾರತ ಉಪಾಧ್ಯಕ್ಷೆ ಡಾ.ಸುಧಾ ಕಾಮತ್ ಮಾತನಾಡಿ, ಆಶಾಗಳು ರೋಗಿಗಳ ಹತ್ತಿರ ಹೋಗಿ ಪರಿಹಾರ ನೀಡುತ್ತಿದ್ದೀರಿ. ತಾಯಿ, ಮಗುವಿನ ಸೇವೆ ಸಲ್ಲಿಸುತ್ತಿದ್ದು, ಶಿಶು ಮರಣ ಪ್ರಮಾಣ ಕಡಿಮೆ ಆಗಿದೆ ಎಂದು ಸರ್ಕಾರವೇ ಒಪ್ಪಿದೆ ಎಂದರು.
ಎಐಯುಟಿಸಿಯ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಬಳ್ಳಾರಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಹೋರಾಟ ಇಡೀ ದೇಶಕ್ಕೆ ಮಾದರಿಯಾಗಿದೆ. ಪ್ರೋತ್ಸಾಹ, ಗೌರವ ಧನದ ಹೆಸರಲ್ಲಿ ಶೋಷಿಸಲಾಗುತ್ತಿದೆ. ಆಶಾಗಳದ್ದು ಸಮಾಜ ಸೇವೆ ಎನ್ನುತ್ತಾರೆ. ಲಕ್ಷಾಂತರ ರೂ. ಪಡೆಯುವ ಸರ್ಕಾರಿ ಅಧಿಕಾರಿಗಳದ್ದು ಸೇವೆ ಅಲ್ಲವೇ? ಹಗಲು ರಾತ್ರಿ ದುಡಿಯುವವರಿಗೆ ಭದ್ರತೆ ಬೇಡವೇ ಎಂದು ಪ್ರಶ್ನಿಸಿದರು.
ಕೆ.ಸೋಮಶೇಖರ ಯಾದಗಿರಿ ಮಾತನಾಡಿ, ಹಲವು ಸವಾಲುಗಳ ಮಧ್ಯೆ ಸಂಘಟನೆ ಕಟ್ಟಿದ್ದು, ಅನ್ಯಾಯ ನಡೆಯದಂತೆ ಹೋರಾಟ ರೂಪಿಸಬೇಕಿದೆ. ಮಾಲಿಕ ವರ್ಗದ ಹೋರಾಟಕ್ಕೆ ಬಲಿಷ್ಠ ಶಸ್ತçವೆಂದರೆ ಸಂಘಟನೆ ಎಂದರು.
ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷೆ ರಮಾ ಟಿ.ಸಿ. ಮಾತನಾಡಿದರು. ಕಾರ್ಯದರ್ಶಿ ಡಿ.ನಾಗಲಕ್ಷಿö್ಮÃ ಅಧ್ಯಕ್ಷತೆ ವಹಿಸಿದ್ದರು.