

ಬೈಲಕುಪ್ಪೆ: ಆವರ್ತಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಸದಸ್ಯರು ಗ್ರಾಮದಲ್ಲಿನ ಮನೆ ಮನೆಗೆ ಶುಕ್ರವಾರ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಶಿವು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ. ಅಲ್ಲದೆ ನೀಡಿರುವ ಎಲ್ಲ ಆಶ್ವಾಸನೆಗಳು ಈಡೇರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನದ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಂದ್ಯಾ ಶ್ರೀಧರ್ಮ, ಸದಸ್ಯರಾದ ಎಂ.ಬಿ.ಶಿವಕುಮಾರ್, ನಾಗಪ್ಪ, ಶಶಿಕಲಾ, ಸುಶೀಲಮ್ಮ, ಪಿ ಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವರುದ್ರ ನಾಯಕ, ಗ್ರಾಮದ ಮುಖಂಡರಾದ ಎ .ಎಂ.ಗುರುಮೂರ್ತಿ, ಧರ್ಮ, ಪಟೇಲ್ ಯೋಗೇಶ್, ಶಿವಪ್ಪ, ಹೇಮಂತ್ ಕುಮಾರ್ ಇತರರು ಇದ್ದರು.