ಆವರಗೆರೆ ಗ್ರಾಮದಲ್ಲಿ ಮಂಜುನಾಥಸ್ವಾಮಿ ಉತ್ಸವ

IMG_20230912_001912.jpg
Published on

ದಾವಣಗೆರೆ: ಶ್ರಾವಣ ಮಾಸದ ಕಡೆಯ ಸೋಮವಾರ ಅಂಗವಾಗಿ ಆವರಗೆರೆ ಗ್ರಾಮದಲ್ಲಿ ಶ್ರೀ ಮಂಜುನಾಥ ಸ್ವಾಮಿ ಉತ್ಸವ ಅದ್ದೂರಿಯಾಗಿ ನಡೆಯಿತು.

ಬೆಳಗ್ಗಿನಿಂದಲೇ ಶ್ರೀಸ್ವಾಮಿಗೆ ಅಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯ ನಡೆದವು. ಭಕ್ತರು ದೇವರ ದರ್ಶನ ಪಡೆದು ಹೂವು-ಹಣ್ಣು ಸಮರ್ಪಿಸಿದರು.

ದೇವಸ್ಥಾನ ಆವರಣದಲ್ಲಿ ಬೆಳಗ್ಗೆಯಿಂದಲೇ ಅನ್ನ ಸಂತರ್ಪಣೆ ಮಾಡಲಾಗಿತ್ತು. ಗ್ರಾಮಸ್ಥರು, ಪರಸ್ಥಳದಿಂದ ಬಂದ ಮಂಜುನಾಥನ ಭಕ್ತರು ಪ್ರಸಾದ ಸವಿದರು.

ಚಂಡೆ ವಾದ್ಯದ ಹಿಮ್ಮೇಳದೊಂದಿಗೆ ಮಧ್ಯಾಹ್ನ, ಗ್ರಾಮದ ಬೀದಿಗಳಲ್ಲಿ ಅಲಂಕೃತ ಮೂರ್ತಿಯ ಪಲ್ಲಕ್ಕಿ ಉತ್ಸವ ಸಾಗಿತು. ಗೃಹಿಣಿಯರು ಆರತಿ ಬೆಳಗಿದರು. ಉತ್ಸವ ಮಾರ್ಗದಲ್ಲಿ ಪಲ್ಲಕ್ಕಿ ಕೆಳಗೆ ಸರದಿ ಸಾಲಿನಲ್ಲಿ ಕೂತ ಮಹಿಳೆಯರು-ಮಕ್ಕಳು ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net