

ಯಾದಗಿರಿ: ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಒಂದಾದ ನಗರದ ಹಳೇ ಬಸ್ ನಿಲ್ದಾಣ ಬಳಿಯ ರೈಲ್ವೆ ಬ್ರೀಜ್(ಭೀಮಾ ನದಿ ಬ್ರೀಜ್)ನ ಒಂದು ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ.
ಅತ್ಯಂತ ಪುರಾತನ ಸೇತುವೆ ಇದಾಗಿದ್ದು, ಪ್ರತಿ ವರ್ಷ ಈ ರಸ್ತೆಯಲ್ಲಿ ಹತ್ತಾರು ತಗ್ಗು ಬಿದ್ದು ವಾಹನ ಸವಾರರು ಒಂದಿಲ್ಲೊAದು ಅಪಘಾತಕ್ಕೊಳಗಾಗುತ್ತಿದ್ದಾರೆ. ದೊಡ್ಡ ದೊಡ್ಡ ಗುಂಡಿಗಳು, ತಿರುವುಗಳನ್ನು ದಾಟುತ್ತ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಜೀವ ಭಯದಿಂದ ವಾಹನ ಸಂಚಾರ ಮಾಡುವಂತಾಗಿದೆ.
ನೇತಾಜಿ ವೃತ್ತದಿಂದ ಸ್ವಲ್ಪ ದೂರದಲ್ಲಿ ಏರುಗತಿಯ ಈ ಸೇತುವೆ ಹತ್ತುವ ವಾಹನಗಳು ಮುಂದಿನ ವಡಗೇರಾ ಕ್ರಾಸ್‌ವರೆಗೂ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಹಾಗೇನಾದರೂ ಯಾಮಾರಿದರೆ ಅಪಘಾತ ಗ್ಯಾರಂಟಿ. ಸಿಂಗಲ್ ರಸ್ತೆಯ ಈ ಸೇತುವೆ ಮೇಲೆ ಒಂದೇ ವಾಹನ ಸುಗಮವಾಗಿ ಚಲಿಸುವುದೇ ಒಂದು ದೊಡ್ಡ ಸಾಹಸದ ಕೆಲಸ. ಅಂತಹದರಲ್ಲಿ ಮುಖಾಮುಖಿಯಾಗುವ ವಾಹನಗಳು ನಡುವೆ ದ್ವಿಚಕ್ರಗಳ ನುಸುಳುವಿಕೆ. ಇದರ ನಡುವೆ ತಗ್ಗುಗಳಿಂದ ಕೂಡಿದ ಹಾಳಾದ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ಸರ್ಕಸ್ ಮಾಡಿದಂತಾಗಿದೆ.
ದಿನದ 24 ತಾಸು ವಾಹನ ಸಂಚರಿಸುವ ರಾಜ್ಯ ಮತ್ತು ರಾಷ್ಟಿçÃಯ ಹೆದ್ದಾರಿಗೆ ಸೇರುವ ಇಂತಹ ಪ್ರಮುಖ ರಸ್ತೆಯ ಗತಿ ಅದೋಗತಿಯಾಗಿದೆ. ಸುಮಾರು 200 ಬಸ್‌ಗಳು, 2000 ಸಾವಿರಕ್ಕೂ ಹೆಚ್ಚು ಲಾರಿ, ಜೀಪ್, ಕಾರ್,ಟಂಟA, ಆಟೋರಿಕ್ಷಾ ಮತ್ತು 1000ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ನಿತ್ಯ ನಿರಂತರವಾಗಿ ಈ ಹಾಳಾದ ರಸ್ತೆ ಮೇಲೆ ಸಂಚರಿಸಬೇಕಾಗಿರುವುದು ಅನಿವಾರ್ಯ.
ಕಳೆದ ಎರಡು ವರ್ಷಗಳ ಹಿಂದೆ ಹೀಗೆ ಈ ರಸ್ತೆ ಹಾಳಾದಾಗ ದುರಸ್ತೆ ಕಾರ್ಯಕೈಗೊಳ್ಳಲಾಗಿತ್ತು. ಆದರೆ ಈಗ ಮತ್ತೇ ಈ ರಸ್ತೆ ಹಾಳಾಗಿ ಒಂದು ವರ್ಷ ಗತಿಸಿದೆ. ಈಗಂತೂ ಮಳೆಗಾಲ, ನಿತ್ಯ ಮಳೆ ಬರುತ್ತಿರುವುದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಮುಖ್ಯವಾಗಿ ದ್ವಿಚಕ್ರ ವಾಹನಗಳ ಸವಾರರು ಅತಿ ಹೆಚ್ಚಿನ ತೊಂದರೆಗೆ ಒಳಪಡುವಂತಾಗಿದೆ.
ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ರಸ್ತೆ ದುರಸ್ತಿಗೆ ಮತ್ತು ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸುವತ್ತ ಗಮನಹರಿಸದಿರುವುದು ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಲಾದರೂ ಈ ಹಾಳಾದ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇನ್ನೂ ನಿರ್ಲಕ್ಷÈವಹಿಸಿದರೆ ದೊಡ್ಡ ಮಟ್ಟದ ಅಪಘಾತಗಳು ಸಂಭವಿಸುವುದರಲ್ಲಿ ಸಂಶಯವೇ ಇಲ್ಲ.