ಆಳಂದನಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಸೆ.9ಕ್ಕೆ

2308Aland2
Published on

ಆಳಂದ: ಪಟ್ಟಣದಲ್ಲಿ ಸೆ.9ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಎಂ.ಅರುಟಗಿ ಹೇಳಿದರು.

ನ್ಯಾಯಾಲಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್ ವಸೂಲಾತಿ, ಮೋಟಾರ್ ಅಪಘಾತ ಪರಿಹಾರ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಭೂ ಸ್ವಾಧೀನ ಪ್ರಕರಣ, ರಾಜಿಯಾಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಅದಾಲತ್‌ನಲ್ಲಿ ವಿಚಾರಣೆ ಮಾಡಿ ಇತ್ಯರ್ಥ ಪಡಿಸಲಾಗುವುದು. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಸೂಚನೆ ನೀಡಿದರು.

ನ್ಯಾಯಾದೀಶರಾದ ಯಲ್ಲಪ್ಪ ಕಲ್ಲಾಪುರೆ, ಸ್ನೇಹಾ ಪಾಟೀಲ್, ಉಪ ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಪಿಐ ಮಹಾದೇವ ಪಂಚಮುಖಿ, ಪುರಸಭೆಯ ಲಕ್ಷö್ಮಣ, ಸಾರಿಗೆ ಇಲಾಖೆಯ ವಿಜಯಕುಮಾರ, ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಡಿ.ಎಸ್.ನಾಡ್ಕರ್, ನ್ಯಾಯವಾದಿಗಳಾದ ಬಿ.ಎ.ದೇಶಪಾಂಡೆ, ಸಂದೀಪ ಚಿಂಚೂರೆ, ಮಹಾದೇವ ಹತ್ತಿ, ಬಿ.ಎಸ್.ನಿಂಬರ್ಗಿ, ಮುರಳೀಧರ ಏಕಬೋಟೆ, ಬಿ.ಜಿ.ಬೀಳಗಿ, ಗೀತಾ ಕುಲಕರ್ಣಿ, ಎಸ್.ಎ.ಪಾಟೀಲ್, ಮಲ್ಲಿಕಾರ್ಜುನ ಗೋವಿನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net