ಆಳಂದ ರಾಘವ ಚೈತನ್ಯ ಲಿಂಗಪೂಜೆಗೆ ಕೋರ್ಟ್ ಗ್ರೀನ್ ಸಿಗ್ನಲ್

IMG-20230214-WA0015
Published on

ಕಲಬುರಗಿ: ಶಿವರಾತ್ರಿಯಂದು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಕಲಬುರಗಿಯ ರಾಮ ಮಂದಿರದ ಶ್ರೀರಾಮ ಸೇನೆಯಿಂದ ಶಿವಮಾಲಾ ಪೂಜೆ ನೆರವೇರಿತು.

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಶ್ರೀರಾಮ ಸೇನೆಯ 9 ಜನ ಶಿವಮಾಲಾ ಧಾರಣೆ ಮಾಡಿದರು. ಶಿವರಾತ್ರಿವರೆಗೆ ಮಾಲಾಧಾರಿಗಳಿಂದ ಪ್ರತಿನಿತ್ಯ ಪೂಜೆ ನಡೆಯಲಿದ್ದು, ಫೆಬ್ರವರಿ 18 ರಂದು ಆಳಂದನ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಕೆ ನಡೆಯಲಿದೆ.

ರಾಘವ ಚೈತನ್ಯ ಲಿಂಗಕ್ಕೆ 15 ಜನರು ಶಿವರಾತ್ರಿಯಂದು ಪೂಜೆ ಸಲ್ಲಿಸಲು ಅವಕಾಶ ನೀಡಿ, ಕೋರ್ಟ್ ಆದೇಶ ನೀಡಿದೆ‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net