ಆಳಂದ; ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ

PH 08
Published on

ಆಳಂದ: ಹದಿನೆಂಟು ವರ್ಷ ತುಂಬಿದ ಯುವಕ, ಯುವತಿಯರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಕರೆ ನೀಡಿದರು.

ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮತದಾರರ ನೋಂದಣಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ವರ್ಗಾವಣೆ ಪತ್ರ (ಟಿಸಿ), ಒಂದು ಭಾವಚಿತ್ರ ಹಾಗೂ ಮನೆಯವರ ಗುರುತಿನ ಚೀಟಿಯೊಂದಿಗೆ ಕಾಲೇಜಿನ ಮುಖ್ಯಸ್ಥರ ಮೂಲಕ ಚುನಾವಣೆ ಶಾಖೆಗೆ ಕಳಿಸಿಕೊಟ್ಟರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗುವುದು ಎಂದರು.

ಶ್ರೇಷ್ಠ ರಾಷ್ಟç ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಎಲ್ಲರೂ ಒಮ್ಮೆ ವೋಟಿಂಗ್ ಲಿಸ್ಟ್ನಲ್ಲಿ ಹೆಸರು ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಅಲ್ಲದೆ ನಿಧನ ಹೊಂದಿದವರ ಹೆಸರು ಡಿಲೀಟ್ ಮಾಡಿಸಬೇಕು ಎಂದು ಸಲಹೆ ನೀಡಿದರು. ತಾಪಂ ಇಒ ಮಾನಪ್ಪ ಕಟ್ಟಿಮನಿ, ಪ್ರಾಚಾರ್ಯೆ ಫಾತಿಮಾ ಜೋಹಾರ್, ಪ್ರಮುಖರಾದ ಮಹೇಶ ಸಜ್ಜನ್, ಶ್ರೀಶೈಲ ಮಾಳಗೆ, ಕಲ್ಯಾಣಪ್ಪ ಬಿಜ್ಜರಗಿ, ಶರಣಬಸಪ್ಪ ಹಕ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net