ಆಳಂದ: ಪಾಠದ ಜತೆಗೆ ಉತ್ತಮ ಸಂಸ್ಕಾರ ನೀಡಿ

PH 07
Published on

ಆಳಂದ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ಹೇಳಿಕೊಡುವುದು ಅಗತ್ಯವಿದೆ. ಹೀಗಾಗಿ ಮನೆಯಲ್ಲಿ ಪಾಲಕರು ಮಕ್ಕಳಿಗೆ ಕಲೆ, ಸಂಸ್ಕೃತಿ ಮತ್ತು ಸಂಸ್ಕಾರ ಹೇಳಿಕೊಡಬೇಕು ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಾಬುರಾವ ಮೇಟೆಕರ್ ಹೇಳಿದರು.

ನಿಂಬರ್ಗಾದ ಶರಣಬಸವೇಶ್ವರ ನವಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರ ಜಗತ್ತಿಗೆ ಪರಿಚಯಿಸಲು ಪ್ರತಿಭಾ ಕಾರಂಜಿ ಆಯೋಜಿಸಲಾಗಿದೆ. ಉತ್ತಮ ಪ್ರದರ್ಶನ ನೀಡಿ ಜಿಲ್ಲೆ ಮತ್ತು ರಾಜ್ಯ ಮಟ್ಟಕ್ಕೆ ಹೋಗಬೇಕು ಎಂದು ಹಾರೈಸಿದರು.

ಶಿಕ್ಷಣ ಸಂಯೋಜಕ ಪ್ರಕಾಶ ಕೋಟ್ರೆ, ಬಿಆರ್‌ಪಿ ಶೈಲಜಾ, ಮುಖ್ಯಗುರು ಶಂಕರ ಡಾಂಗೆ, ಪ್ರಮುಖರಾದ ರಾಮಪ್ಪ ನಾವಿ, ಅಶೋಕ ಚವ್ಹಾಣ್, ಅಂಬಿಕಾ ಅಷ್ಟಗಿ ಇತರರಿದ್ದರು. ಸಂತೋಷಿ ಚಡಂಕೆ ನಿರೂಪಣೆ ಮಾಡಿದರು. ಗುಂಡೇರಾವ ಹಳ್ಳಿಮನಿ ಸ್ವಾಗತಿದರು. ಅಶೋಕ ಗಾಯಕವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net