

ಆಳಂದ: ತಾಲೂಕಿನ ಜನತೆಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ `ನ್ಯಾಯ ನಿಮ್ಮದು-ನೆರವು ನಮ್ಮದು' ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಎಂ.ಅರುಟಗಿ ತಿಳಿಸಿದರು.
ಸರಸಂಬಾದ ಕ್ರಾಂತಿವೀರ ದಿ. ರಾಮಚಂದ್ರಪ್ಪ ಪಾಟೀಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ, ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರತಿ ಪ್ರಜೆ ಕಾನೂನು ತಿಳಿದುಕೊಳ್ಳಬೇಕು. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಹೀಗಾಗಿ ಕೆಲ ಸಣ್ಣ-ಪುಟ್ಟ ವ್ಯಾಜ್ಯಗಳನ್ನು ಸ್ಥಳೀಯವಾಗಿ ರಾಜಿ ಸಂಧಾನ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪುರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ನೇಹಾ ಪಾಟೀಲ್ ಮಾತನಾಡಿದರು. ನ್ಯಾಯವಾದಿ ದೇವಾನಂದ ಹೊದಲೂರಕರ್ ಉಪನ್ಯಾಸ ನೀಡಿದರು. ಸಮತಾ ಲೋಕ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಉಪಾಧ್ಯಕ್ಷ ಮಹಾದೇವ ಖಾನಾಪುರೆ, ಪ್ರಮುಖರಾದ ಜಗನ್ನಾಥ ದೇಶಮುಖ, ಶಿವಕುಮಾರ ಜಿಡಗೆ, ಪಂಡಿತ ಜಿಡಗೆ, ಜ್ಯೋತಿ ವಿ.ಬಂದಿ, ಶ್ರೀಕಾಂತ ಮೇಂಗಜಿ, ಡಾ.ರಮಾಕಾಂತ ಹುಗ್ಗೆ, ಡಾ.ಮಿರ್ಜಾಹಮೀದ್ ಹುಲಾಬೇಗ, ಡಿ.ಎಸ್.ನಾಡ್ಕರ್, ಕಮಲಾಕರ ರಾಠೋಡ್, ಮಲ್ಲಿನಾಥ ಗೋವಿನ್, ಎ.ಸಿ.ತೋಳೆ, ಮಹಾದೇವ ಹತ್ತಿ, ಎಂ.ವಿ.ಏಕಬೋಟೆ, ಸಂದೀಪ ಚಿಂಚೂರೆ, ಸಾಯಿನಾಥ ಕಠಾರೆ, ಸಂಗಣ್ಣ ಕೆರಮಗಿ, ಡಿ.ಎಂ.ಪಾಟೀಲ್ ಇತರರಿದ್ದರು.
ಮುಖ್ಯಗುರು ವಿಠ್ಠಲ ಹವಲ್ದಾರ ಸ್ವಾಗತಿಸಿದರು. ರೇಣುಕಾ ಬುಕ್ಕಾ ವಂದಿಸಿದರು. ಶ್ರೀಶೈಲ್ ಬಂಕಾಪೂರೆ ವಂದಿಸಿದರು.