ಆಳಂದ; ಅವಘಡದಿಂದ ಪಾರಾಗಲು ಮುಂಜಾಗ್ರತೆ ಅವಶ್ಯ

PH 17
Published on

ಆಳಂದ: ಅಗ್ನಿ, ಜಲ, ವಿದ್ಯುತ್, ನೈಸರ್ಗಿಕ ಅವಘಡಗಳಿಂದ ಪಾರಾಗಲು ಮುಂಜಾಗ್ರತೆ ಅವಶ್ಯಕವಾಗಿದೆ ಎಂದು ಅಗ್ನಿಶಾಮಕ ಠಾಣೆ ಅಧಿಕಾರಿ ಜೈಭೀಮ ಕೋರೆ ಹೇಳಿದರು.

ಎಸ್‌ಆರ್‌ಜಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಶನಿವಾರ ಅಗ್ನಿಶಾಮಕ ದಳದಿಂದ ಅಣಕು ಪ್ರದರ್ಶನ ನಡೆಸಿ, ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಇಲಾಖೆಯಿಂದ ಶಾಲೆ ಮಕ್ಕಳಿಗೆ ಅಗ್ನಿ ಅವಘಡ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಗ್ನಿ ಅವಘಡಗಳು ಹೆಚ್ಚಾಗುತ್ತಿದ್ದು, ಇದರಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ನಿರ್ಲಕ್ಷÈವೇ ಕಾರಣ ಎಂದು ಹೇಳಿದರು.

ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಸಂಘ-ಸAಸ್ಥೆಗಳು, ಸಾರ್ವಜನಿಕರು ಅಗ್ನಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ಮಾಹಿತಿ, ತರಬೇತಿ ಪಡೆದುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ 112, 108, ಹತ್ತಿರದ ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಗ್ನಿ ಅವಘಡಗಳಲ್ಲಿ ಬೆಂಕಿಗಿAತಲೂ ಹೊಗೆಯೇ ಹೆಚ್ಚು ಅಪಾಯಕಾರಿ, ಇದೆಲ್ಲ ಮಾಹಿತಿ ತಿಳಿದುಕೊಳ್ಳಬೇಕು ಎಂದರು. ಪ್ರಮುಖರಾದ ಪ್ರಕಾಶ ಮಾಳಗೆ, ಸುರೇಶಕುಮಾರ ಚವ್ಹಾಣ್, ರಾಜೇಂದ್ರ, ಸಿದ್ದಪ್ಪ, ಶಿವರಾಜ, ಸಂಜೀವಕುಮಾರ, ಜ್ಯೋತಿ ವಿಶಾಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net