ಆಲೂರು ಸಿದ್ದಾಪುರದಲ್ಲಿ ಜಾಥಾ

27ss2
Published on

ಶನಿವಾರಸಂತೆ: ಸಮಿಪದ ಆಲೂರು ಸಿದ್ದಾಪುರ ಗ್ರಾಮದಲ್ಲಿ ಕೊಡಗು ಜಿಲ್ಲಾಡಳಿತ, ಕರ್ನಾಟಕ ವಸತಿ ಮತ್ತು ಶಿಕ್ಷಣ ಸಂಸ್ಥೆ, ಮುರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ವತಿಯಿಂದ ಮಂಗಳವಾರ ಸಂವಿಧಾನ ಅರಿವು ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುರಾರ್ಜಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸಂಘ-ಸಂಸ್ಥೆಯ ಪ್ರಮುಖರು ಆಲೂರು ಸಿದ್ದಾಪುರಕ್ಕೆ ಆಗಮಿಸಿದ ಸಂವಿಧಾನ ರಥವನ್ನು ಹೊರ ವಲಯದಲ್ಲಿ ಸ್ವಾಗತಿಸಿದರು. ನಂತರ ಪ್ರಮುಖರು ರಥದಲ್ಲಿದ್ದ ಡಾ. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಮಂಗಳ ವಾದ್ಯ ತಂಡದೊಂದಿಗೆ ಮೆರವಣಿಗೆಯು ಮುಖ್ಯರಸ್ತೆ ಮೂಲಕ ಸಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣಕ್ಕೆ ಆಗಮಿಸಿತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇಣು ಅವರು ಜಾಥಾದ ಉದ್ದೇಶ ಮತ್ತು ನಾಗರಿಕರ ಜವಾಬ್ದಾರಿ ಕುರಿತು ಮಾತನಾಡಿದರು.
ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲೆ ಕೆ.ಆರ್.ಭಾರತಿ, ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಮಾಜಿ ಉಪಾಧ್ಯಕ್ಷೆ ದಮಯಂತಿ, ಸದಸ್ಯ ಸತೀಶ್‌ಕುಮಾರ್, ಶಾಲಾ ಸಮಿತಿ ಸದಸ್ಯರಾದ ಪ್ರಭು, ರೇಖಾ, ಜಗದೀಶ್, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net