ಆಲೂರು ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ

HEMANTHKUMAR- press meet (6)
Published on

ಹಾಸನ: ಆಲೂರು ರೈಲ್ವೆ ನಿಲ್ದಾಣದಲ್ಲಿ ಮತ್ತೊಮ್ಮೆ ತಾತ್ಕಾಲಿಕವಾಗಿ ಮೂರು ತಿಂಗಳುಗಳ ಕಾಲ ರೈಲು ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಜನಸ್ಪಂದನಾ ವೇದಿಕೆ ಸಂಸ್ಥಾಪಕ ಹೇಮಂತ್ ಕುಮಾರ್ ತಿಳಿಸಿದರು.

ರೈಲ್ವೆ ಇಲಾಖೆಯು ಕೇಂದ್ರದ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವರಿಗೆ ನಾವು ಸಲ್ಲಿಸಿದ ಮನವಿ ಆಧಾರದ ಮೇಲೆ ಆಲೂರು ರೈಲ್ವೆ ನಿಲ್ದಾಣದಲ್ಲಿ 2024 ಫೆಬ್ರವರಿ 7ರಂದು ಪ್ರಾಯೋಗಿಕವಾಗಿ ಆರು ತಿಂಗಳವರೆಗೆ ರೈಲು ನಿಲುಗಡೆ ಆದೇಶ ಹೊರಡಿಸಲಾಗಿತ್ತು. ನಂತರದಲ್ಲಿ ರೈಲು ನಿಲುಗಡೆ ರದ್ದು ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಿ ಮೂರು ತಿಂಗಳವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈಲ್ವೆ ನಿಯಮದ ಪ್ರಕಾರ ತಿಂಗಳಿಗೆ ಕನಿಷ್ಠ 30,000 ರೂ. ಆದಾಯ ಬಂದಿದ್ದರೆ ರೈಲ್ವೆ ಕಮರ್ಷಿಯಲ್ ಇಲಾಖೆ ನಿಲುಗಡೆ ಆದೇಶವನ್ನು ರದ್ದು ಪಡಿಸುತ್ತಿರಲಿಲ್ಲ. ನಿಗದಿತ ಪ್ರಮಾಣದಲ್ಲಿ ಆಲೂರು ನಿಲ್ದಾಣದಲ್ಲಿ ಆದಾಯ ಬಂದಿರುವುದಿಲ್ಲ ಇಲಾಖೆಯವರು ಎಂದು ನಮಗೆ ತಿಳಿಸಿದ್ದಾರೆ. ಆದೇಶ ದೇಶದ ಎಷ್ಟೋ ರೈಲು ನಿಲ್ದಾಣಗಳಲ್ಲಿ 6,000 ರೂ. ಕ್ಕಿಂತ ಕಡಿಮೆ ಆದಾಯವಿದ್ದರೂ ಶಾಶ್ವತ ನಿಲುಗಡೆಯನ್ನು ಮಾಡಿಕೊಟ್ಟಿದ್ದಾರೆ. ಇದೇ ಮಾದರಿಯಲ್ಲಿ ಆಲೂರಿನಲ್ಲಿ ಶಾಶ್ವತ ರೈಲು ನಿಲುಗಡೆಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಸಂಸದರು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿನಯ್, ಸೋಮಶೇಖರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net