

ಆಲೂರು : ತಾಲ್ಲೂಕಿನಲ್ಲಿ ಪದೇ ಪದೆ ಬೆಂಕಿ ಅನಾಹುತಗಳು ಸಂಭವಿಸುತ್ತಿದ್ದು,ಇಂತಹ ದುರ್ಘಟನೆಗಳನ್ನು ತಡೆಯಲು ಅಗ್ನಿ ಶಾಮಕ ಠಾಣೆ ಸ್ಥಾಪಿಸಬೇಕೆಂದು ಆಲೂರು ಪಟ್ಟಣದ ರಾಧಮ್ಮ ಜನಸ್ಪಂದನ ಮುಖ್ಯಸ್ಥ ಹೇಮಂತ್ ಕುಮಾರ್ ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರದಲ್ಲಿರುವ ಅಗ್ನಿಶಾಮಕ ಠಾಣೆ ಹಾಸನದಿಂದ ತಾಲ್ಲೂಕು ಕೇಂದ್ರಕ್ಕೆ ಸುಮಾರು 15 ಕಿ.ಮೀ. ಹಾಗೂ ತಾಲೂಕಿನ ಕೊನೆಯ ಗ್ರಾಮಗಳಾದ ಕೆ.ಹೊಸಕೋಟೆ ಹರಿಹಳ್ಳಿ,ಕಾಡು ಬಸವಣ್ಣ ಅರೆ,ನಿಡನೂರು,ವಾಟೆಹೊಳೆ ಚನ್ನಹಳ್ಳಿ,ಸೇರಿದಂತೆ ಹಲವು ಗ್ರಾಮಗಳಿಗೆ ಸುಮಾರು 45 ರಿಂದ 50 ಕಿ.ಮೀ. ಅಂತರದಲ್ಲಿದೆ.ಯಾವುದೇ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುದ್ದಿಮುಟ್ಟಿಸಿದರೂ ಘಟನಾ ಸ್ಥಳಕ್ಕೆ 1 ರಿಂದ 2 ಗಂಟೆಗೂ ಹೆಚ್ಚು ಸಮಯಬೇಕಾಗುತ್ತದೆ. ಅಷ್ಟರೊಳಗೆ ಅಪಾರ ಹಾನಿ ಸಂಭವಿಸುತ್ತಿವೆ ಆಲೂರು ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಇಂತಹ ಅವಘಡಗಳು ಆಗಿಂದಾಗ್ಗೆ ಸಂಭವಿಸುತ್ತಿವೆ ಸುಮಾರು ಎಂಟತ್ತು ವರ್ಷಗಳಿಂದ ಆಲೂರಿನ ನಾಗರೀಕರು ಒತ್ತಾಯಿಸುತ್ತಾ ಬಂದಿದ್ದಾರೆ ಇನ್ನಾದರೂ ಈ ರೀತಿಯ ಘಟನೆಗಳು ಮರುಕಳಿಸದಂತೆ ತಕ್ಷಣ ಸರ್ಕಾರ ಸರ್ಕಾರದ ಜನಪ್ರತಿನಿದಿಗಳು ಆಲೂರು
ಕೇಂದ್ರ ಸ್ಥಾನದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿದರೆ ತಾಲ್ಲೂಕಿನ ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರಲ್ಲದೇ ಹಾಂಜಿಹಳ್ಳಿ ಗ್ರಾಮದ ಯೋಗೇಶ್ ಎಂಬುವವರ ಮೆಕ್ಕೆಜೋಳ ಮೆದೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ಸರ್ಕಾರ ಹಾಗೂ ಸರ್ಕಾರದ ಜನಪ್ರತಿನಿದಿಗಳು ಪರಿಹಾರ ಕೊಡಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಮಂತ್ ಕುಮಾರ್ ಒತ್ತಾಯಿಸಿದರು.