ಆಲೂರಿನಲ್ಲಿ ಮಂಟೆಸ್ವಾಮಿ ಕಂಡಾಯ ಮೆರವಣಿಗೆ

11Rajesh3
Published on

ಚಾಮರಾಜಗರ: ತಾಲೂಕಿನ ಆಲೂರು ಗ್ರಾಮದಲ್ಲಿ ಶ್ರೀಮಂಟೇಸ್ವಾಮಿ ಕಂಡಾಯೋತ್ಸವ ವಿಜೃಂಭಣೆಯಿಂದ ನೆರವೇರಿತು. ಗ್ರಾಮದ ವೀರಶೈವ ಸಮಾಜದ ನೀಲಗಾರರು(ದೇವರ ಗುಡ್ಡರು) ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅರ್ಕೇಶ್ವರ ದೇವಾಲಯದಲ್ಲಿ 5 ಕಂಡಾಯಗಳಿಗೆ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಗ್ರಾಮದ ಪ್ರಮುಖ ರಸ್ತೆಗಳನ್ನು ಶೃಂಗರಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವರಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದ್ದರು.

ನಂತರ ಬಸವ ಭವನದಲ್ಲಿ ಪ್ರಸಾದ ವಿನಿಯೋಗ ನಡೆಯಿತು. ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಮುಖಂಡರು ನೀಲಗಾರರು(ದೇವರ ಗುಡ್ಡರು) ವೀರಶೈವ ಸಮಾಜದ ಮುಖಂಡರು, ಬಸವೇಶ್ವರ ಸಂಘದ ಯುವಕರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net