ಆಲೂರಿನಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ

IMG-20251019-WA0187
Published on

ಆಲೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ಅಂಗವಾಗಿ ಆಲೂರು ತಾಲೂಕು ಘಟಕದ ನೇತೃತ್ವದಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್‌ನ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು.

ಶಾಸಕ ಸಿಮೆಂಟ್ ಮಂಜು ಸೇರಿದಂತೆ ತಾಲೂಕು ಘಟಕದ ಹಾಗೂ ನಾಗರೀಕ ಗಣವೇಷಧಾರಿಗಳು ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರೆ, ರಸ್ತೆಯ ಎರಡೂ ಬದಿ ಜನರು ನಿಂತು ಆಸಕ್ತಿಯಿಂದ ವೀಕ್ಷಿಸಿ, ಪಥ ಸಂಚಲನವನ್ನು ಸ್ವಾಗತಿಸಿದರು. ಅಲ್ಲದೇ, ಗಣವೇಷಧಾರಿಗಳ ಮೇಲೆ ಪುಷ್ಪಮಳೆಗರೆದು, ಜಯಘೋಷ ಮೊಳಗಿಸಿದರು. ಪಥಸಂಚಲನದಲ್ಲಿದ್ದ ಭಗವಾಧ್ವಜ ಹಾಗೂ ಸಂಘದ ಸಂಸ್ಥಾಪಕರ ಭಾವಚಿತ್ರಕ್ಕೆ ಶಾಸಕ ಸಿಮೆಂಟ್ ಮಂಜು ಹಾಗೂ ಜನರು ಗೌರವ ಸಲ್ಲಿಸಿದರು. ಕೆಇಬಿ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಪಥ ಸಂಚಲನ ಮಾಡಿದರು.

ಬಿಗಿ ಬಂದೋಬಸ್ತ್: ಪಥ ಸಂಚಲನದ ಹಿನ್ನೆಲೆಯಲ್ಲಿ ಆಲೂರು ಪೊಲೀಸ್ ಠಾಣೆಯ ಇನ್‌ಸ್ಪೆೆಕ್ಟರ್ ಮೋಹನ್ ರೆಡ್ಡಿ, ಸಬ್ ಇನ್‌ಸ್ಪೆೆಕ್ಟರ್ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಆಲೂರು ತಾಲೂಕಿನ ಕಾರ್ಯವಾಹಕ ಸಂತೋಷ್, ತಾಲೂಕು ಬೌದ್ಧಿಕ ಪ್ರಮುಖ ರವಿ, ಜಿಲ್ಲಾ ಸಂಪರ್ಕ ಪ್ರಮುಖ್ ವಿಜಯ್, ಆರ್‌ಎಸ್‌ಎಸ್‌ನ ಉಮೇಶ್,ಲೋಹಿತ್, ಹರ್ಷಿತ್, ಹರೀಶ್, ಶಶಿಧರ್, ಕೃಷ್ಣಮೂರ್ತಿ ನವೀನ್ ದಡದಳ್ಳಿ, ಮಾವನೂರು ಮೋಹನ್, ಸಂದೀಪ್, ರಮೇಶ್ ಹಳೆಲೂರು, ಲಕ್ಷ್ಮಣ್ ಹಳೆ ಆಲೂರು, ಕೆ.ಕೆ ಪ್ರಸಾದ್, ಪೂವಯ್ಯ, ಬಿಜೆಪಿ ಮಾಜಿ ಅಧ್ಯಕ್ಷ ಕದಳ ಲೋಕೇಶ್, ಜೈಪಾಲ್ ಹುಣಸುವಳ್ಳಿ, ಗ್ರಾ.ಪಂ.ಸದಸ್ಯರು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net