ಆಲಿಕಲ್ಲು ಮಳೆ-ಗಾಳಿ ಭತ್ತದ ಫಸಲಿಗೆ ಹಾನಿ

27 KAMPLI 03
Published on

ಕಂಪ್ಲಿ: ತಾಲೂಕಿನ ಸೋಮಲಾಪುರ, ಹೊನ್ನಳ್ಳಿ, ಮಾವಿನಹಳ್ಳಿ, ಸಂಕ್ಲಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಆಲಿಕಲ್ಲು ಮಳೆ, ಬಿರುಗಾಳಿಯಿಂದಾಗಿ ಭತ್ತದ ಫಸಲು ಹಾನಿಯಾಗಿದ್ದು, ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಭಾನುವಾರ ಜಂಟಿ ಸಮೀಕ್ಷೆ ನಡೆಸಿದರು.

ಸೋಮಲಾಪುರ ಗ್ರಾಮದಲ್ಲಿ ಸುಮಾರು 280 ಎಕರೆ, ಹೊನ್ನಳ್ಳಿಯಲ್ಲಿ 46, ಮಾವಿನಹಳ್ಳಿಯಲ್ಲಿ 42 ಹಾಗೂ ಸಂಕ್ಲಾಪುರದಲ್ಲಿ 95 ಎಕರೆಯಷ್ಟು ಭತ್ತ ಬೆಳೆ ಸಮೀಕ್ಷೆ ಮಾಡಲಾಗಿದ್ದು, ಇನ್ನೂ ಮುಂದುವರಿದಿದೆ. ಆಲಿಕಲ್ಲು ಮಳೆಯಿಂದಾಗಿ ಭತ್ತದ ಕಾಳು ನೆಲಕ್ಕೆ ಉದುರಿದೆ. ಸೋಮಲಾಪುರ ಗ್ರಾಮದಲ್ಲಿ ಮಳೆಯಿಂದಾಗಿ ವೀರೇಶ ಅವರ ಕಚ್ಚಾಮನೆ ಭಾಗಶಃ ಬಿದ್ದಿದೆ.

ಗ್ರಾಮ ಆಡಳಿತಾಧಿಕಾರಿಗಳಾದ ಅಬ್ದುಲ್ ನಿಯಾಜ್, ಜ್ಯೋತೆಪ್ಪ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರೇಣುಕರಾಜ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿದ್ದರು. ರೈತರಾದ ಎಸ್.ಕೆ.ಗುರುರಾಜ, ಎಸ್.ಕೆ.ಮಲ್ಲಿಕಾರ್ಜುನ, ವೇಷಗಾರು ರಂಗಯ್ಯ, ಆರ್.ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net