ಆಲಮಟ್ಟಿ ಜಲಾಶಯದಿಂದ ಸಮರ್ಪಕ ನೀರು ನಿರ್ವಹಣೆ, ಮಹಾರಾಷ್ಟ್ರ ಮುಖ್ಯಮಂತ್ರಿಯಿಂದ ಪ್ರಶಂಸೆ, ಸಚಿವ ಕಾರಜೋಳ ಕಾರ್ಯವೈಖರಿ ಕೊಂಡಾಡಿದ ಬಿಜೆಪಿ ಮುಖಂಡರು

1660795984636
Published on

ವಿಜಯಪುರ: ನೀರು ನಿರ್ವಹಣೆ ವಿಷಯದಲ್ಲಿ ಆಲಮಟ್ಟಿ ಅಧಿಕಾರಿಗಳು ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಕಾರ್ಯವೈಖರಿಗೆ ಮಹಾರಾಷ್ಟ್ರದ ಸಿಎಂ ಏಕನಾಥ ಸಿಂಧೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಉಮೇಶ ಕೋಳಕೂರ ಹೇಳಿದರು.

ಮಹಾರಾಷ್ಟ್ರ ಯಾವಾಗಲೂ ನೀರಿನ ವಿಷಯದಲ್ಲಿ ಕರ್ನಾಟಕದೊಂದಿಗೆ ತಗಾದೆ ತೆಗೆಯುತ್ತಲೇ ಬಂದಿದೆ. ಆದರೆ, ಗೋವಿಂದ ಕಾರಜೋಳ ಅವರು ನೀರಾವರಿ ಮಂತ್ರಿಯಾಗಿ ಮಾಡಿದ ನೀರು ನಿರ್ವಹಣೆ ವಿಧಾನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿರುವುದು ಹೆಮ್ಮೆಯ ಸಂಗತಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮಹಾರಾಷ್ಟ್ರ ನೀರಿನ ವಿಷಯದಲ್ಲಿ ಯಾವಾಗಲೂ ಕಾಲು ಕೆರೆದು ಜಗಳ ಕಾಯುತ್ತಿತ್ತು. ಆದರೆ, ಇಂದು ಅದೇ ರಾಜ್ಯ ಕರ್ನಾಟಕದ ಅದರಲ್ಲೂ ಆಲಮಟ್ಟಿ ಅಧಿಕಾರಿಗಳು ಹಾಗೂ ಅವರಿಗೆ ಸೂಕ್ತ ಸಲಹೆ ಸೂಚನೆ ನೀಡುತ್ತಾ ಬಂದಿರುವ ಕಾರಜೋಳ ಅವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿರುವುದು ಖುಷಿಯ ಸಂಗತಿ. ಇದು ಕೇವಲ ಆಲಮಟ್ಟಿ ವಿಷಯಕ್ಕೆ ಮಾತ್ರವಲ್ಲ ಇಡೀ ರಾಜ್ಯದ ನೀರು ನಿರ್ವಹಣೆ ಹಾಗೂ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ‌ ನಿಭಾಯಿಸಿದ್ದು ಮೆಚ್ಚುಗೆಯ ವಿಚಾರವೇ ಸರಿ ಎಂದರು.

ಡೋಣಿ ನದಿ ಪುನಃಶ್ಚೇತನಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೋಳಕೂರ, ಈಗಾಗಲೇ ಗೋವಿಂದ ಕಾರಜೋಳ ಅವರು ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿಂದಿನವರು ಕೇವಲ ಕಾಟಾಚಾರದ ಹೇಳಿಕೆ ನೀಡಿ ಕೈಬಿಟ್ಟಿದ್ದರು. ಇದೀಗ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರಜೋಳ ಅವರು ಶ್ರಮ ವಹಿಸುತ್ತಿದ್ದಾರೆ ಎಂದರು.

ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಮಾತನಾಡಿ, ಗೋವಿಂದ ಕಾರಜೋಳ ಅವರು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಬಳಿಕ ನೀರು ನಿರ್ವಹಣೆ ಸಮರ್ಪಕವಾಗಿದೆ. ಕಳೆದ ಬೇಸಿಗೆಯಲ್ಲೂ ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನೀರಿನ ಸಮಸ್ಯೆ ಆಗದಂತೆ ನಿಭಾಯಿಸಿದ್ದಾರೆ. ಪ್ರಾಯೋಗಿಕವಾಗಿ ಅಧಿಕಾರಿಗಳಿ

ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ, ಕಂಬಾಗಿ ದಾಟಿ ನೀರು ಹರಿದಿರಲಿಲ್ಲ. ಈ ಬಾರಿ ಕಟ್ಟಕಡೆಯವರೆಗೂ ನೀರು ಹರಿದಿದೆ. ಇಂಡಿ ಭಾಗದ ಕಾಲುವೆಗಳಿಗೂ ನೀರು ಸಮರ್ಪಕವಾಗಿ ಹರಿದಿದೆ. ಇದಕ್ಕೆ ಗೋವಿಂದ ಕಾರಜೋಳ ಅವರ ಕಾರ್ಯವೈಖರಿಯೇ ಕಾರಣ ಎಂದರು.

ಹಿರಿಯ ನೀರಾವರಿ ತಜ್ಞರ ಜೊತೆ ಸಮಾಲೋಚಿಸುತ್ತಾ, ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡುವ ಮೂಲಕ ನೀರು ನಿರ್ವಹಣೆ ಮಾಡಿದ ಜಲಸಂಪನ್ಮೂಲರ ಕಾರ್ಯ ವೈಖರಿ ಮೆಚ್ಚುವಂಥದ್ದು ಎಂದರು.

ಈ ಹಿಂದೆ ನೀರು ನಿರ್ವಹಣೆ ಬಹಳ ಕೆಟ್ಟದ್ದಾಗಿತ್ತು. ವಿಜಯಪುರ ಮಹಾನಗರಕ್ಕೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿರಲಿಲ್ಲ. ಇದೀಗ ಗೋವಿಂದ ಕಾರಜೋಳ ಅವರು ಜಲಸಂಪನ್ಮೂಲ ಸಚಿವರಾದ ಬಳಿಕ ಈ ಸಮಸ್ಯೆ ನೀಗಿದೆ ಎಂದರು.

ಈ ಹಿಂದೆ ನಾನು ಪಾಲಿಕೆ ಸದಸ್ಯ ಇದ್ದಾಗ ವಿಜಯಪುರಕ್ಕೆ ನೀರು ಹರಿಸುವ ಬಗ್ಗೆ ಸಾಕಷ್ಟು ಧ್ವನಿ ಎತ್ತಿದ್ದೆ. ಡೆಡ್ ಸ್ಟಾಕ್ ನೀರನ್ನೂ ಬಳಸಿಕೊಂಡಿದ್ದರಿಂದ ವಿಜಯಪುರ ಕ್ಕೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಆದರೆ ಗೋವಿಂದ ಕಾರಜೋಳ ಅವರು ಆ ಸಮಸ್ಯೆ ಹೋಗಲಾಡಿಸಿದ್ದಾರೆ ಎಂದರು.

ಒಟ್ಟಾರೆಯಾಗಿ ನೀರು ನಿರ್ವಹಣೆ ವಿಚಾರದಲ್ಲಿ ಈ ಹಿಂದಿನ ಜಲಸಂಪನ್ಮೂಲ‌ ಸಚಿವರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ, ಗೋವಿಂದ ಕಾರಜೋಳ ಅವರು ಉತ್ತಮವಾಗಿ ಕಾರ್ಯ‌‌ನಿರ್ವಹಿಸಿದ್ದಾರೆ ಎಂಬುದು ತಮ್ಮ ಸುದ್ದಿಗೋಷ್ಠಿಯ ಸಾರಾಂಶವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲೋಣಿ, ಹೌದು ಎಂದುತ್ತರಿಸಿದರು.

ಭೀಮಾಶಂಕರ ಬಿರಾದಾರ, ನವೀನ ಅರಕೇರಿ, ಮಲ್ಲು ಕನ್ನೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net