ಆಲಮಟ್ಟಿ ಜಲಾಶಯ ಹೋರಾಟಕ್ಕೆ ಸಹಕರಿಸಿ

Contribute to the Almatti Reservoir struggle
ಹೂವಿನಹಿಪ್ಪರಗಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿದರು. ಹಣಮಂತ್ರಾಯ ಗುಣಕಿ, ಬಿ.ಬಿ. ಪಾಟೀಲ, ಮಲ್ಲು ಗುಂಡಾನವರ, ಚೋಳಪ್ಪ ಜಮಖಂಡಿ ಇದ್ದರು.
Published on

ಹೂವಿನಹಿಪ್ಪರಗಿ : ಆಲಮಟ್ಟಿಯ ಲಾಲ್​ ಬಹದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟದ 519.60 ರಿಂದ 524.26 ಕ್ಕೆ ಎತ್ತರಿಸಿ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಜೂ. 30ರಂದು ನಿಡಗುಂದಿಯಲ್ಲಿ ಹಮ್ಮಿಕೊಂಡಿರುವ ಬೃಹತ್​ ಹೋರಾಟಕ್ಕೆ ಎಲ್ಲರೂ ಸಹಕರಿಸಬೇಕು ಎಂದು ರೈತ ಸಂದರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮನವಿ ಮಾಡಿದರು.

ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಸಭಾ ಭವನದಲ್ಲಿ ಸೋಮವಾರ ಜರುಗಿದ ಪೂರ್ವಭಾವಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1962ರಲ್ಲಿ ಆಗಿನ ಪ್ರಧಾನಿ ದಿ. ಲಾಲಬಹಾದೂರ್​ ಶಾಸ್ತ್ರಿ ಅವರು ಅಣೆಕಟ್ಟಿಗೆ ಅಡಿಗಲ್ಲ್ಲು ಹಾಕಿದ ಪರಿಣಾಮ ಹಾಗೂ ಸಹಸ್ರಾರು ರೈತರು ಜಮೀನು ಕಳೆದುಕೊಂಡ ಪರಿಣಾಮ ಇಂದು ಅಣೆಕಟ್ಟು ನಿಮಾರ್ಣವಾಗಿದೆ. ಆದರೆ ಅದು ಬರಿ ಅಣೆಕಟ್ಟಿಗೆ ಸೀಮಿತವಾಗದೆ ನಮ್ಮ ಜಿಲ್ಲೆಯ ರೈತರಿಗೆ ನೀರು ಕೊಡುವ ಜೀವನಾಡಿಯಾಗಬೇಕು. ಜಮೀನು ಕಳೆದುಕೊಂಡವರಿಗೆ ಹೆಚ್ಚಿನ ಲಾಭ ಸಿಗುತ್ತಿಲ್ಲ ಎಂದರು.

ಇಲ್ಲಿ ಜನ& ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ನಿಮಾರ್ಣವಾಗಿದೆ. 450 ಕಿ.ಮೀ. ದೂರದ ಜಿಂದಾಲಿಗೆ ನೀರನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು. ಆಲಮಟ್ಟಿ ಜಲಾಶಯಮಟ್ಟ ಹೆಚ್ಚಳಕ್ಕಾಗಿ ನಡೆಯುವ ಹೋರಾಟದಲ್ಲಿ ಉತ್ತರ ಕರ್ನಾಟಕದ ರೈತರು, ಮಠಾಧೀಶರು, ಕನ್ನಡ ಪರ ಸಂಟನೆಗಳು, ದಲಿತ ಸಂಟನೆಗಳು ಭಾಗವಹಿಸುತ್ತಿವೆ ಎಂದರು.

ಹಣಮಂತ್ರಾಯ ಗುಣಕಿ, ಬಿ.ಬಿ. ಪಾಟೀಲ, ಮಲ್ಲು ಗುಂಡಾನವರ, ಚೋಳಪ್ಪ ಜಮಖಂಡಿ, ಗುರಲಿಂಗಪ್ಪ ಪಡಸಲಗಿ, ಶಾರದಾ ಕಾಳನ್ನವರ, ಶಾಂತಾ ಹಿರೇಮಠ, ಗುರುಬಸಮ್ಮ ಡವಳಗಿ, ಸಂಗಮೇಶ ಹೊರಗಿನಮನಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net