

ಗದಗ: ನಗರದ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್್ಸ) ಕೋವಿಡ್ 19 ಪರೀಕ್ಷೆ ಅತ್ಯಾಧುನಿಕ ಆರ್ಟಿಪಿಸಿಆರ್ ಯಂತ್ರ (ರಿಸರ್ವ್ ಟ್ರಾನ್ಸ್ಕ್ರಿಪ್ಶನ್ ಪಾಲಿಮರೈಸ್ಡ್ ಚೈನ್ ರಿಯಾಕ್ಷನ್) ಶುಕ್ರವಾರ ಕಾರ್ಯ ನಿರ್ವಹಣೆ ಆರಂಭಿಸಿದೆ.
ಸದ್ಯ ಜಿಮ್ಸ್ನಲ್ಲಿ ಟ್ರೂನಾಟ್ ಯಂತ್ರದ ಮೂಲಕ ಕೋವಿಡ್ 19 ಪರೀಕ್ಷೆ ಆರಂಭಿಸಲಾಗಿದ್ದು, ದಿನಕ್ಕೆ ಕೇವಲ 50 ಸ್ಯಾಂಪಲ್ಗಳ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 1 ಕೋಟಿ ರೂ. ಮೊತ್ತದಲ್ಲಿ ಆರ್ಟಿಪಿಸಿಇಆರ್ ಯಂತ್ರ ಸ್ಥಾಪಿಸಲಾಗಿದೆ. ಆರ್ಟಿಪಿಸಿಆರ್ ಪ್ರಯೋಗಾಲಯ ಮೂಲಕ ಒಂದೇ ಸಲಕ್ಕೆ 50 ಕೋವಿಡ್ 19 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಬಹುದು. ಅಂದರೆ ದಿನಕ್ಕೆ 4 ಸಲ ಅಂದರೆ ಸುಮಾರು 200 ರೋಗಿಗಳ ಸ್ಯಾಂಪಲ್ ಪರೀಕ್ಷೆ ಮಾಡಬಹುದು ಎಂದು ಜಿಮ್್ಸ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ. ಮಹೇಶ ಬರಗುಂಡಿ ವಿವರಿಸಿದರು.
ನೂತನ ಆರ್ಟಿಪಿಸಿಆರ್ ಯಂತ್ರದಿಂದ 1 ಸಲಕ್ಕೆ 62 ಗಂಟಲು ದ್ರವ ಮಾದರಿ ಪರೀಕ್ಷೆಗಳನ್ನು ಮಾಡಬಹುದಾಗಿದ್ದು, 1 ಸಲದ ಪರೀಕ್ಷೆಗೆ ಕನಿಷ್ಠ 5 ಗಂಟೆಗಳು ಬೇಕಾಗುತ್ತದೆ. 24 ಗಂಟೆಯಲ್ಲಿ ನಾಲ್ಕು ಸಲ ಪರೀಕ್ಷೆ ಮಾಡಲಾಗುತ್ತಿದೆ. ಅಂದರೆ ದಿನಕ್ಕೆ 200 ಕ್ಕೂ ಹೆಚ್ಚು ಸ್ಯಾಂಪಲ್ ಪರೀಕ್ಷೆ ಮಾಡಬಹುದಾಗಿದೆ. ಡಾ.ಪಿ.ಎಸ್. ಭೂಸರಡ್ಡಿ, ಜಿಮ್್ಸ ನಿರ್ದೇಶಕ
ಟ್ರೂನಾಟ್ ಯಂತ್ರ: ಕೋವಿಡ್ 19 ಪ್ರಕರಣಕ್ಕೆ ಸಂಬಂಧಿಸಿದಂತೆ ರೋಗಿಯಿಂದ ತೆಗೆದುಕೊಂಡ ಗಂಟಲ ದ್ರವ ಸ್ಯಾಂಪಲ್ ಅನ್ನು ಬೆಂಗಳೂರು, ಬಳ್ಳಾರಿ, ಶಿವಮೂಗ್ಗ ಜಿಲ್ಲೆಗೆ ಕಳಿಸಬೇಕಿತ್ತು. ಹೀಗಾಗಿ ಸ್ಯಾಂಪಲ್ನ ವೈದ್ಯಕೀಯ ವರದಿ ಬರುವುದು ಎರಡ್ಮೂರು ದಿನವಾಗುತ್ತಿತ್ತು. ಇದು ಕೊಂಚ ಸಮಸ್ಯೆ ಆಗಿದ್ದರಿಂದ ಜಿಲ್ಲಾಡಳಿತ ಜಿಮ್್ಸ ಆಸ್ಪತ್ರೆಯಲ್ಲಿಯೇ ಏ. 22ರಿಂದ ಟ್ರೂನಾಟ್ ಯಂತ್ರವುಳ್ಳ ಕೋವಿಡ್ 19 ಪ್ರಯೋಗಾಲಯ ಆರಂಭಿಸಿತು. ಈ ಯಂತ್ರದಿಂದ ದಿನಕ್ಕೆ 48ರಿಂದ 50 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಬಹುದು.