

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕರ್ನಾಟಕ ಉತ್ತರ ಪ್ರಾಂತ ಕಾರ್ಯಾಲಯ ಕೇಶವ ಕುಂಜದಲ್ಲಿ ಭಕ್ತಿ ಭಂಡಾರಿ ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಸಾಮರಸ್ಯ ವೇದಿಕೆ ವತಿಯಿಂದ ಪೌರ ಕಾರ್ವಿುಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ನಿತ್ಯ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ಶ್ರಮಿಸುವಂಥ ಶ್ರಮಿಕ ವರ್ಗ ಸ್ವಚ್ಛತೆಯ ಸೈನಿಕರು. ಬಹಳ ಶ್ರದ್ಧೆಯಿಂದ ನಗರ, ಗ್ರಾಮ ಸ್ವಚ್ಛತೆ ಕಾಪಾಡಲು ಹಗಲು- ಇರುಳು ದುಡಿಯುತ್ತಿದ್ದಾರೆ. ಇಂತಹ ಪೌರ ಕಾರ್ವಿುಕರಿಗೆ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಬೇಂಡೆ, ಹಿರಿಯ ಪ್ರಚಾರಕ ಸು. ರಾಮಣ್ಣ ಸನ್ಮಾನಿಸಿದರು.
ಪೌರ ಕಾರ್ವಿುಕರಾದ ಸಂಜೀವ ಕೊಡತ್ವಾಡ, ಸಂತೋಷ ಯರಮಸಾಲ, ದೀಪಕ ಹನುಮನಹಳ್ಳಿ, ಸಾವಕ್ಕ, ರತ್ನಮ್ಮರನ್ನು ಸನ್ಮಾನಿಸಲಾಯಿತು.
ನಾಕೋಡ ಟ್ರಸ್ಟ್ನಿಂದ ನೆರವು
ಹುಬ್ಬಳ್ಳಿ: ಅಕ್ಷಯ ತೃತೀಯಾ, ಬಸವ ಜಯಂತಿಯಂಥ ಉತ್ಸವಗಳ ಬಹಿರಂಗ ಆಚರಣೆಗೆ ಕರೊನಾ ನಿಮಿತ್ತದ ಲಾಕ್ಡೌನ್ ಅಡ್ಡಿಯಾಗಿದೆ. ಹಲವರು ಮನೆಯಲ್ಲೇ ಆಚರಣೆ ಮಾಡಿದರೆ, ಅನೇಕರಿಗೆ ಅದಕ್ಕೂ ಗತಿ ಇಲ್ಲ. ಇಂಥ ಕುಟುಂಬಗಳಿಗೆ ನೆರವಾಗಲು ಇಲ್ಲಿಯ ಗಾನಗಂಧರ್ವ ಪಂಡಿತ ಅರ್ಜುನಸಾ ನಾಕೋಡ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಭಾನುವಾರ ದಿನಸಿ ವಸ್ತುಗಳ ಕಿಟ್ ವಿತರಣೆ ನಡೆಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಪ್ರೇರಣೆ ಮೇರೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ, ಬಡವರು ಇರುವ ಸ್ಥಳಕ್ಕೆ ಹೋಗಿ ಸೂಕ್ತ ಅಂತರ ನಿರ್ವಹಣೆಯೊಂದಿಗೆ ಕಿಟ್ ನೀಡಲಾಯಿತು. ಪಂ. ಬಾಲಚಂದ್ರ ನಾಕೋಡ, ಸಂಜೀವ ಮುತ್ತಗಿಕರ, ರಂಗಾ ಬದ್ದಿ, ಬಸವರಾಜ ಯಕಲಾಸಪುರ, ರಾಘವೇಂದ್ರ ನಾಕೋಡ, ಮಧುಸೂದನ ನಾಕೋಡ, ಪವನ ಪುಟಗೆ, ಪವನ ಕುಲಕರ್ಣಿ, ಗಣೇಶ ಮೊದಲಾದವರು ಬೇರೆ ಬೇರೆ ತಂಡಗಳಲ್ಲಿ ತೆರಳಿ ನೆರವು ವಿತರಿಸಿದರು.