

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2024&25ನೇ ಸಾಲಿನ ಡಿಸೆಂಬರ್/ಜನವರಿ 2025ರಲ್ಲಿ ಜರುಗಿದ ಬಿಎ, ಬಿಎಸ್ಸಿ, ಬಿಎಸ್ಸಿ (ಎಸ್ಸ್ಟಿ), ಬಿಬಿಎ, ಬಿಸಿಎ, ಬಿಎಸ್ಡಬ್ಲು, 1ನೇ ಸೆಮಿಸ್ಟರ್ನ ಎಸ್ಇಪಿ ವಿದ್ಯಾರ್ಥಿಗಳ ಪರೀಾ ಫಲಿತಾಂಶ ಪ್ರಕಟಿಸಲಾಗಿದೆ. ಏ.17ರ ಸಂಜೆ 5 ಗಂಟೆ ನಂತರ UUCMS Student Portal ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಮಹಾವಿದ್ಯಾಲಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.