

ಬಾಗಲಕೋಟೆ: ಈ ಸಲ ಕಪ್ ನಮ್ದೇ ಅನ್ನೋದು 17 ವರ್ಷಗಳಿಂದ ಆರ್‌ಸಿಬಿ ತಂಡದ ಅಭಿಮಾನಿಗಳ ಉದ್ಘೋಷ 18ನೇ ವರ್ಷಕ್ಕೆ ಫಲ ನೀಡಿದೆ. ರಾಜ್ಯಾದ್ಯಂತ ಈಗ ಗೆಲುವಿನ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದ ಕೆಲವೇ ಗಂಟೆಗಳಲ್ಲಿ ತಂಡದ ಅಭಿಮಾನಿಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇಂಥ ಸುಸಂದರ್ಭದಲ್ಲಿ ನವ ಜೋಡಿ ಆರ್‌ಸಿಬಿ ಜೆರ್ಸಿ ಧರಿಸಿ ಹಸೆಮಣೆ ಏರಿ ವಿನೂತನವಾಗಿ ಸಂಭ್ರಮಾಚರಣೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಬುಧವಾರ ನಡೆದ ಮದುವೆ ಸಮಾರಂಭ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಮರೇಗುದ್ದಿ ಗ್ರಾಮದ ಪರಮಾನಂದ ಹಾಗೂ ಶ್ರುತಿ ಎಂಬ ಜೋಡಿ ಆರ್‌ಸಿಬಿ ಜೆರ್ಸಿ ಹಾಕಿಕೊಂಡೇ ಹೊಸ ಜೀವನಕ್ಕೆ ಕಾಲಿಟ್ಟಿದೆ. ವಧು-ವರರ ಗೆಳೆಯರು ನವಜೋಡಿಗೆ ಚಾಂಪಿಯನ್ ತಂಡ ಎತ್ತಿ ಹಿಡಿದ ಮಾದರಿ ಕಪ್‌ನ್ನು ಹಾಗೂ ಹೊಸ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿ ಶುಭಾಶಯ ಕೋರಿದ್ದಾರೆ.