ಆರ್ಪಿಐ ಪಕ್ಷ ಲೋಕಾಸಭೆ ಚುನಾವಣೆಯಲ್ಲಿ ಏಕಾಂಗಿ ಹೋರಾಟ:ಎಂ. ವೆಂಕಟಸ್ವಾಮಿ ಘೋಷಣೆ

ಆರ್ಪಿಐ ಪಕ್ಷ ಲೋಕಾಸಭೆ ಚುನಾವಣೆಯಲ್ಲಿ ಏಕಾಂಗಿ ಹೋರಾಟ:ಎಂ. ವೆಂಕಟಸ್ವಾಮಿ ಘೋಷಣೆ
Published on

ಹಾಸನ: ಮುಂಬರುವ ಲೋಕಾಸಭೆ ಚುನಾವಣೆಯಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಏಕಾಂಗಿಯಾಗಿ ಸ್ಪರ್ದೆ ಮಾಡಲಿದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಘೋಷಣೆ ಮಾಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಆರ್.ಪಿ.ಐ ಪಕ್ಷದ ನೂತನ ರಾಜ್ಯ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜದಲ್ಲಿ ಜೆಡಿಎಸ್, ಬಿಜೆಪಿ ಹೊಂದಾಗುತ್ತಿದೆ. ನಮ್ಮ ಮೊದಲ ಶತ್ರು ಕಾಂಗ್ರೆಸ್, ಅಗತ್ಯತೆಗೆ ಹೊಂದಾದರೇ ಮಾತ್ರ ನಾವು ಇತರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗುತ್ತೇವೆ. ಇಲ್ಲವಾದರೇ ಏಕಾಂಗಿ ಹೋರಾಟ ಮಾಡುವ ಮೂಲಕ ಕೊನೆ ಪಕ್ಷ ಒಂದಾದರೂ ಸೀಟು ಗೆಲುವು ಪಡೆಯುವುದಾಗಿ ತಿಳಿಸಿದರು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ಈ ಗುಲಾಮಗಿರಿ ತೊಲಗುತ್ತದೆ. ಅಂಬೇಡ್ಕರ್ ಆಶಯ ಈಡೇರಿಸಲು ಈ ರಿಪಬ್ಲಿಕ್ ಪಾರ್ಟಿ ಹುಟ್ಟಿಕೊಂಡಿದೆ. ರಾಮದಾಸ್ ಅಠವಳೆ ನೇತೃತ್ವದಲ್ಲಿ ಮುನ್ನೆಡೆದಿದೆ. ಈ ಪಕ್ಷ ಬೆಳೆದರೇ ಕಾಂಗ್ರೆಸ್‌ಗೆ ಕಷ್ಟವಾಗುತ್ತದೆ ಎಂದು ನಮ್ಮ ಪಕ್ಷವನ್ನು ಹಿನ್ನಡೆ ಮಾಡಲು ಮುಂದಾಗಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದರು.

ಮುಂದಿನ ಡಿಸೆಂಬರ್ ತಿಂಗಳಲ್ಲಿ ತೆಲಂಗಾಣ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಸ್ಪರ್ಧೆ ಂಆಡುವ ಬಗ್ಗೆ ಅ.3ರ ಸಭೆಯಲ್ಲಿ ಚರ್ಚಿಸಲಾಗುವುದು. ನೂತನ ರಾಜ್ಯ ಸಮಿತಿ ಪದಾಧಿಕಾರಿಗಳು ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕೆರೆ ನೀಡಿದರು.

ಕಾರ್ಯಕ್ರಮದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ನೂತನ ರಾಜ್ಯಾಧ್ಯಕ್ಷ ಆರ್.ಪಿ.ಐ. ಸತೀಶ್, ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಹಸ್ತಾಂತರಿಸಿದರು. ನೂತನ ಜಿಲ್ಲಾಧ್ಯಕ್ಷ ಬೂದೇಶ್ ನಿಟ್ಟೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ, ಕಾರ್ಯಧ್ಯಕ್ಷ ಗೋವಿಂದಯ್ಯ, ಎ.ಬಿ. ಹೊಸಮನಿ, ಯುವ ಘಟಕದ ರಾಜ್ಯಾಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ಎ. ಗೋಪಾಲ್, ಖಜಾಂಚಿ ಚಂದ್ರಶೇಖರ್, ಶ್ರೀನಿವಾಸ್, ಸುರೇಶ್, ಗೋಪಾಲ್, ಹರೀಶ್ ಕುಮಾರ್, ಯೋಗೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net