ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗಿ

klb1
ಯಡ್ರಾಮಿಯಲ್ಲಿ ಭಾನುವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ಸನ್ಮಾನ ಸಮಾರಂಭವನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಉದ್ಘಾಟಿಸಿದರು. ಶ್ರೀ ಡಾ.ರುದ್ರಮುನಿ ಶಿವಾಚಾರ್ಯ, ಶ್ರೀ ಕೆಂಚವೃಷಭೇAದ್ರ ಶಿವಾಚಾರ್ಯ, ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಶರಣಕುಮಾರ ಮೋದಿ, ಸಂತೋಷ ಪಾಟೀಲ್, ರಾಜಶೇಖರ ಸೀರಿ, ಸಿದ್ದು ಅಂಗಡಿ, ಮಲ್ಲನಗೌಡ ಪಾಟೀಲ್, ದಂಡಪ್ಪ ಸಾಹು, ಚಂದ್ರಶೇಖರ ಪುರಾಣಿಕ, ದೇವಿಂದ್ರಪ್ಪಗೌಡ ಬಿರಾದಾರ ಇದ್ದರು.
Published on

ಯಡ್ರಾಮಿ: ಅಹಿಂಸಾ ಪರಮೋಧರ್ಮ ಎಂಬ ತತ್ವ ಅನುಸರಿಸುತ್ತಿರುವ ವೀರಶೈವ ಲಿಂಗಾಯತ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ಅಗತ್ಯ ನೆರವು ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಕಡಕೋಳ ಮಹಾಮಠದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯ ನುಡಿದರು.

ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜೇವರ್ಗಿ-ಯಡ್ರಾಮಿ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಭಾನುವಾರ ಏರ್ಪಡಿಸಿದ್ದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಹಾಸಭಾ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಒಗ್ಗಟ್ಟು ಕಡಿಮೆಯಾಗುತ್ತಿದೆ. ಸಮಾಜದ ಮುಖಂಡರು ವೈಮನಸ್ಸುಗಳನ್ನು ಬದಿಗೊತ್ತಿ ಯುವಕರಿಗೆ ಮಾರ್ಗದರ್ಶನ ನೀಡುವ ಮೂಲಕ ಸಂಘಟನೆ ಬಲಪಡಿಸಬೇಕು ಎಂದು ಸಲಹೆ ನೀಡಿದರು.

ಸಮಾಜದ ಬೆಳವಣಿಗೆಗೆ ರಾಜಕೀಯವೂ ಅಗತ್ಯವಿದ್ದು, ಸಮಾಜದ ಆಗು-ಹೋಗುಗಳಲ್ಲಿ ಭಾಗಿಯಾಗುವ ಉತ್ತಮರಿಗೆ ರಾಜಕೀಯವಾಗಿ ಬೆಳೆಯಲು ಪಕ್ಷಭೇದ ಮರೆತು ಸಹಕರಿಸಬೇಕು. ಮಠ-ಮಾನ್ಯಗಳಿಂದ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಧರ್ಮ ಉಳಿದಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಅರ್ಥಿಕವಾಗಿ ಹಿಂದುಳಿದ ಮಠಗಳಿಗೆ ಸಮಾಜ ಬೆಂಬಲವಾಗಿ ನಿಲ್ಲಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಮಹಾಸಭಾ ನೂತನ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ರಾಜಶೇಖರ ಸೀರಿ ಮಾತನಾಡಿ, ಅಧಿಕಾರದ ಆಸೆ ನನಗಿಲ್ಲ. ಆದರೆ ತಾಲೂಕಿನ ಜನರ ಆಶಯ ಹಾಗೂ ಜಿಲ್ಲೆ ಮುಖಂಡರ ಸಹಕಾರದಿಂದ ಚುನಾವಣೆಯಲ್ಲಿ ಗೆದ್ದಿz್ದೆÃನೆ. ದಿನದ 24 ತಾಸು ಸಮಾಜದ ಸೇವೆಗೆ ಸಿದ್ಧ ಎಂದು ಹೇಳಿದರು.

ಆಲೂರಿನ ಶ್ರೀ ಕೆಂಚವೃಷಭೇAದ್ರ ಶಿವಾಚಾರ್ಯ ಹಾಗೂ ಯಡ್ರಾಮಿಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯದ ಕಾರ್ಯಕ್ರಮವನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಳ ನರಿಬೋಳ ಉದ್ಘಾಟಿಸಿದರು. ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ರಾಜ್ಯ ಕಾರ್ಯಕಾರಿ ಸದಸ್ಯ ಸಂತೋಷ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಕಲ್ಲಹಂಗರಗಾ, ಜೇವರ್ಗಿ-ಯಡ್ರಾಮಿ ತಾಲೂಕು ಅಧ್ಯಕ್ಷ ಸಿದ್ದು ಅಂಗಡಿ, ಜಿಪಂ ಮಾಜಿ ಸದಸ್ಯ ದಂಡಪ್ಪ ಸಾಹು ಕುಳಗೇರಿ, ಪ್ರಮುಖರಾದ ಮಲ್ಲನಗೌಡ ಪಾಟೀಲ್ ನೇದಲಗಿ, ಚಂದ್ರಶೇಖರ ಪುರಾಣಿಕ, ಶರಣು ಗುಗ್ಗರಿ, ದೇವಿಂದ್ರಪ್ಪಗೌಡ ಬಿರಾದಾರ, ಸಿದ್ದಣ್ಣ ಸಾಹು ಹೂಗಾರ, ಮಹಾನಿಂಗಪ್ಪಗೌಡ ಬಂಡೆಪ್ಪಗೋಳ, ಗುರುಬಸಪ್ಪ ಸಾಹು ಸಣ್ಣಳ್ಳಿ, ಸಿದ್ದುಗೌಡ ಮಾಲಿಪಾಟೀಲ್, ಬಸಲಿಂಗಪ್ಪ ಸಾಹು ಅಂಕಲಕೋಟಿ, ಶ್ರೀಶೈಲ ಸಾಹು ತಾಳಿಕೋಟಿ, ರಾಜಶೇಖರ ಡಗ್ಗಾ, ಅಪ್ಪುಗೌಡ ಪಾಟೀಲ್, ನಿಂಗನಗೌಡ ಜವಳಗಿ, ಶಂಭುಲಿAಗ ತಾಳಿಕೋಟಿ, ರೇವಣಸಿದ್ದಪ್ಪ ಅಂಕಲಕೋಟಿ, ನಿಂಗರಾಜ ಪಟ್ಟಣಶೆಟ್ಟಿ, ಬಸವರಾಜ ಹೂಗಾರ ಇತರರಿದ್ದರು.
ಆನಂದ ಯತ್ನಾಳ ಸ್ವಾಗತಿಸಿದರು. ಚನ್ನವೀರ ತಾಳಿಕೋಟಿ ವಂದಿಸಿದರು. ಮಲ್ಲಿಕಾರ್ಜುನ ಯಾದಗಿರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net