ಆರ್ಥಿಕತೆಗೆ ಸ್ವ ಸಹಾಯ ಸಂಘಗಳ ಸಾಥ್

30 bk-1
Published on

ಬಸವಕಲ್ಯಾಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯವಲ್ಲದೆ ರಾಷ್ಟ್ರ ಮಟ್ಟದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಜೀವನ ನಡೆಸಲು ಸ್ವ ಸಹಾಯ ಸಂಘಗಳ ಪಾತ್ರ ದೊಡ್ಡದು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ರಾಜೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಾಲಕ್ಷ್ಮೀಪೂಜೆ ಹಾಗೂ ಸಾಧನ ಸಮಾವೇಶದಲ್ಲಿ ಮಾತನಾಡಿದರು.

ಬಿಸಿ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಮಾತನಾಡಿ, ಬಸವಕಲ್ಯಾಣ ತಾಲೂಕು ವ್ಯಾಪ್ತಿಯಲ್ಲಿ ೩೯೧೯ ಸ್ವ ಸಹಾಯ ಸಂಘಗಳು ರಚಿಸಿದ್ದು, ೩೫,೦೧೬ ಸದಸ್ಯರಿದ್ದಾರೆ. ಲಾಭಾಂಶ ವಿತರಣೆ, ಮಕ್ಕಳಿಗೆ ಲ್ಯಾಪ್ ಟಾಪ್, ಬೆಂಚ್, ಡೆಸ್ಕ್, ವಿಜ್ಞಾನ ನಿಧಿ ಶಿಶು ವೇತನ ವಿತರಿಸಲಾಗಿದೆ. ಐದು ಕೆರೆ ಅಭಿವೃದ್ಧಿ ಮಾಡಲಾಗಿದೆ ಎಂದರು.

ಸದಲಾಪುರದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಮುಖರಾದ ಬಸವರಾಜ ಸೀಗಿ, ಎಂಡಿ ಹನೀಫ್, ಸಾಧನಾ ಜೋಶಿ, ಸೋಮಲಿಂಗ ಕೆ, ನಾಗಶೆಟ್ಟಿ, ಭೀಮರಾಯ, ಮಹಾಂತೇಶ ಎಂಡಿ, ಜ್ಯೋತಿ, ರೇಣುಕಾ, ಸುನೀತಾ, ಶ್ರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net