ಆರ್ಥಿಕ ಹೂಡಿಕೆಗೆ ಮಾರ್ಗದರ್ಶನ ಅತ್ಯಗತ್ಯ

10-08-Shiva-5
ರಾಯಚೂರು ವಿಶ್ವವಿದ್ಯಾಲಯದಲ್ಲಿ ಸುರಕ್ಷಿತ ಹೂಡಿಕೆ ಕುರಿತು ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಎಸ್.ಪಾರ್ವತಿ ಮಾತನಾಡಿದರು. ಹುಮನಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಸಚಿನ್ ಕುಲಕರ್ಣಿ, ವಿಭಾಗದ ಸಂಯೋಜಕ ಡಾ.ಶಾಂತಕುಮಾರ ಇದ್ದರು.
Published on

ರಾಯಚೂರು: ಹೂಡಿಕೆಗಳ ಬಗ್ಗೆ ಸೂಕ್ತ ಜ್ಞಾನ ಮತ್ತು ಮಾರ್ಗದರ್ಶನವಿದ್ದಾಗ ಮಾತ್ರ ನಾವು ಸುರಕ್ಷಿತವಾಗಿ ಹೂಡಿಕೆ ವ್ಯವಹಾರ ನಡೆಸಲು ಸಾಧ್ಯವಾಗುತ್ತಿದ್ದು, ಇಲ್ಲದಿದ್ದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹುಮನಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಸಚಿನ್ ಕುಲಕರ್ಣಿ ತಿಳಿಸಿದರು.
ಸ್ಥಳೀಯ ರಾಯಚೂರು ವಿವಿಯಲ್ಲಿ ವಾಣಿಜ್ಯಶಾಸ ವಿಭಾಗದಿಂದ ಸುರಕ್ಷಿತ ಹೂಡಿಕೆ ಕುರಿತು ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಹೂಡಿಕೆಗೆ ಅವಕಾಶ ನೀಡುವುದು ಮತ್ತು ಮಾರ್ಗದರ್ಶನ ಮಾಡುವುದಕ್ಕೆ ಬಹುದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ ಎಂದರು.
ಜನರಲ್ಲಿ ಹೂಡಿಕೆಗಳ ಬಗ್ಗೆ ಸಾಕಷ್ಟು ಆಸಕ್ತಿ ಮತ್ತು ಕುತೂಹಲವಿದೆ. ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ, ಯಾವುದರಲ್ಲಿ ಕಡಿಮೆ ನಷ್ಟದ ಸಾಧ್ಯತೆಯಿದೆ. ದೀರ್ಘಾವ ಹೂಡಿಕೆಗೆ ಯಾವುದು ಸೂಕ್ತ, ಅಲ್ಪಾವಗೆ ಯಾವುದು ಸೂಕ್ತ ಎಂದು ಜನರು ಯೋಚಿಸುತ್ತಾರೆ.
ಷೇರುಗಳನ್ನು ಕೊಂಡು ಕೊಳ್ಳುವುದು, ಮ್ಯೂಚುವಲ್ ಂಡ್ ಮತ್ತು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದು ಬಹು ಬೇಡಿಕೆಯ ಸಂಗತಿಯಾಗಿವೆ. ಈ ಮೂರು ಭಿನ್ನ ಹೂಡಿಕೆಯಾಗಿದ್ದು, ಅವುಗಳ ನಡುವಿನ ವ್ಯತ್ಯಾಸ ಹಾಗೂ ಕಾರ್ಯವಿಧಾನ ತಿಳಿದಿರುವುದು ಅವಶ್ಯವಾಗಿದೆ. ಅರ್ಧಂಬರ್ಧ ಜ್ಞಾನ, ಕೆಟ್ಟ ಮಾರ್ಗದರ್ಶನ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಡಾ.ಸಚಿನ್ ಕುಲಕರ್ಣಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಎಸ್.ಪಾರ್ವತಿ ಮಾತನಾಡಿ, ಇಂದಿನ ಯುವಜನರಲ್ಲಿ ಹೂಡಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಕಂಡು ಬರುತ್ತಿದೆ. ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರೂ ಹೂಡಿಕೆ ಮಾಡುತ್ತಿದ್ದಾರೆ. ಜ್ಞಾನ ಮತ್ತು ಅನುಭವ ತುಂಬಿದ ನಡೆ ಎಂದಿಗೂ ಲದಾಯಕವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕ ಡಾ.ಶಾಂತಕುಮಾರ, ಉಪನ್ಯಾಸಕರಾದ ಎಂ.ರೂಪಾ, ಆರ್.ವಿಜಯಲಕ್ಷ್ಮಿ, ಡಾ.ವಿಜಯ ಸರೋದೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net