ಆರ್ಥಿಕ ಸೌಲಭ್ಯ ಒದಗಿಸಲು ಸ್ಪಂದಿಸಿ

Pressmeet
Published on

ಚಿತ್ರದುರ್ಗ: ರಾಜ್ಯದಲ್ಲಿ 2022ರ ಜುಲೈ 1ರಿಂದ 2024ರ ಜುಲೈ 31 ರೊಳಗೆ ನಿವೃತ್ತರಾಗಿರುವ ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರಿಗೆ 7ನೇ ವೇತನ ಆಯೋಗದ ವರದಿಯಲ್ಲಿ ಪಿಂಚಣಿ ಸೌಲಭ್ಯಗಳಿಂದ ಉಂಟಾಗಿರುವ ಆರ್ಥಿಕ ನಷ್ಟ ಸರಿಪಡಿಸಿ, ಸೌಲಭ್ಯ ಒದಗಿಸಬೇಕು ಎಂದು ರಾಜ್ಯ ನಿವೃತ್ತ ನೌಕರರ ವೇದಿಕೆ ರಾಜ್ಯ ಪ್ರಧಾನ ಸಂಚಾಲಕ ಎಂಪಿಎಂ ಷಣ್ಮುಖಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7ನೇ ವೇತನ ಆಯೋಗದ ಜಾರಿಯಿಂದಾಗಿ ಮೇಲ್ಕಂಡ ಅವಧಿಯಲ್ಲಿ ನಿವೃತ್ತರಾದವರಿಗೂ, 2024 ಆಗಸ್ಟ್ 31ರಂದು ನಿವೃತ್ತಿ ಹೊಂದಿದ ಅಧಿಕಾರಿಗಳು ಮತ್ತು ನೌಕರರಿಗೂ ದೊರೆತಿರುವ ಆರ್ಥಿಕ ಸೌಲಭ್ಯಗಳ ಲಾಭದಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದರು.

ನಿವೃತ್ತಿ ಸೌಲಭ್ಯಗಳಾದ ಡಿಸಿಆರ್‌ಜಿ, ಕಮುಟೇಷನ್ (ಆಪ್ಷನ್) ಮತ್ತು ಗಳಿಕೆ ರಜೆ ನಗದೀಕರಣಗಳ ಆರ್ಥಿಕ ಲೆಕ್ಕಚಾರದಲ್ಲಿ ಆಗುತ್ತಿರುವ ಆರ್ಥಿಕ ನಷ್ಟ ಸರಿಪಡಿಸಲು ನಿವೃತ್ತ ಅಧಿಕಾರಿಗಳು ಮತ್ತು ನೌಕರರಿಗೆ 2022 ಜುಲೈ 1ರಿಂದಲೇ ಈ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ವೇದಿಕೆಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ಸಮೀಪದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸೆ. 18ರ ಬೆಳಗ್ಗೆ 11ಕ್ಕೆ ರಾಜ್ಯಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ನಿವೃತ್ತರಾಗಿ ಸೌಲಭ್ಯ ವಂಚಿತರಾದ ರಾಜ್ಯದ 17,625 ಅಧಿಕಾರಿಗಳು ಹಾಗೂ ನೌಕರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಸರ್ಕಾರದ ಗಮನ ಸೆಳೆದು ಸಿಎಂಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.

ವೇದಿಕೆ ರಾಜ್ಯ ಸಂಚಾಲಕ ಎಚ್.ಗೋವಿಂದಯ್ಯ, ರಾಮಚಂದ್ರಪ್ಪ, ಡಿ.ದಯಾನಂದ, ಎಚ್.ಸಿ.ಪದ್ಮಾವತಿ, ಸುಗೇಂದ್ರ, ಡಿ.ಟಿ.ಜಗನ್ನಾಥ, ರಮೇಶ ಮದರಿ, ಎ.ನೀಲಕಂಠಚಾರ್, ಬಿ.ಕೆ.ಹನುಮಂತಪ್ಪ, ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net