ಆರ್ಥಿಕ ಸುಧಾರಣೆಗೆ ಇದೆ ಮನಮೋಹನ್‌ಸಿಂಗ್ ಕೊಡುಗೆ

CTD NUDINAMANA----
Published on

ಚಿತ್ರದುರ್ಗ: ಶ್ರೇಷ್ಠ ಆರ್ಥಿಕ ತಜ್ಞ, ಚಿಂತಕ ಡಾ. ಮನಮೋಹನ್‌ಸಿಂಗ್ ಅವರು ಪ್ರಧಾನಿಯಾಗಿದ್ದ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ದೇಶದ ಆರ್ಥಿಕ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಜಿ. ದೇವರಾಜ್ ಹೇಳಿದರು.

ಕರ್ನಾಟಕ ರಾಜ್ಯವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟದ ಜಿಲ್ಲಾ ಘಟಕ ಮತ್ತು ಮುಕ್ತ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್ ಅವರಿಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನಮೋಹನ್‌ಸಿಂಗ್ ಸರಳ ವ್ಯಕ್ತಿತ್ವದ ಜ್ಞಾನ ಭಂಡಾರವಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಮಾತನಾಡಿ,ಸರಳ,ಸಜ್ಜನಿಕೆ ವ್ಯಕ್ತಿತ್ವದ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂ ತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ,ಪ್ರೊ.ಎಚ್.ಲಿಂಗಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಡಾ.ಎಂ.ಕೆ.ಪ್ರಭುದೇವ್ ಮಾತನಾಡಿದರು. ಒಕ್ಕೂಟ ಜಿಲ್ಲಾ ಕಾರ‌್ಯದರ್ಶಿ ಡಾ.ಎಚ್.ಗೋಪಾಲ್,ಮುಕ್ತ ವೇದಿಕೆ ಸಂಚಾಲಕ ಪ್ರೊ.ಸಿ.ಬ ಸವರಾಜಪ್ಪ,ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ,ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ, ಡಾ. ಎನ್.ಎಸ್.ಮಹಂತೇಶ್ ಹಾ ಗೂ ಯಶೋಧ ರಾಜಶೇಖರಪ್ಪ,ಡಾ.ನಟರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net