

ಸೊರಬ: ಆರ್ಥಿಕವಾಗಿ ಸದೃಢರಲ್ಲದವರು, ಶ್ರಮಿಕರು, ಬವರಿಗೆ ಕಡಿಮೆ ದರಕ್ಕೆ ಗುಣಮಟ್ಟದ ಆಹಾರ ಸಿಗಲಿ ಎಂಬುದೇ ಇಂದಿರಾ ಕ್ಯಾಂಟೀನ್ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ನೂತನ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ಬಡತನ ನಿರ್ಮೂಲನೆಗೆ ಆದ್ಯತೆ ನೀಡಿದ್ದರ ಸಂಕೇತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಕ್ಯಾಂಟಿನ್ ಆರಂಭಿಸಿದ್ದರು ಎಂದರು. ನಂತರ ಬಂದ ಬಿಜೆಪಿ ಸರ್ಕಾರ ಇದರಲ್ಲಿ ರಾಜಕೀಯ ಮಾಡಿ ಯೋಜನೆಗೆ ಅಡ್ಡಿಪಡಿಸಿತು. ಬಡವರು ಕೂಲಿಕಾರ್ಮಿಕರು ಮತ್ತೆ ನಮಗೆ ಶಕ್ತಿ ನೀಡಿದ್ದರ ಪರಿಣಾಮ ಕ್ಯಾಂಟೀನ್ ಆರಂಭಗೊಂಡಿವೆ. ತಾಲೂಕಿನ ಜನತೆ ಇದರ ಉಪಯೋಗ ಪಡೆದುಕೊಳ್ಳಲಿ ಎಂದು ಆಶಿಸಿದರು. ರೈತರ ಬೇಸಿಗೆ ಬೆಳೆ ಕೈಸೇರುವ ಹೊತ್ತಿನಲ್ಲಿ ಮಳೆ ಪ್ರಾರಂಭವಾಗಿ ಮೆಕ್ಕೆಜೋಳ ಹಾಗೂ ಭತ್ತದ ಬೆಳೆ ನಷ್ಟವಾಗಿದೆ. ಸರ್ಕಾರ ಪರಿಹಾರ ನೀಡುತ್ತದೆ. ಮಳೆ ಹಾನಿ ವರದಿ ತಯಾರಿಗೆ, ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಗಳ ಸಭೆ ಕರೆಯಲು ಸೂಚಿಸಲಾಗಿದೆ ಎಂದರು. ಪುರಸಭೆ ಅಧ್ಯಕ್ಷ ಪ್ರಭು ಮೇಸಿ, ಉಪಾಧ್ಯಕ್ಷೆ ರಂಜಿನಿ, ಸದಸ್ಯ ಅನ್ಸಾರ್ ಅಹ್ಮದ್, ಮುಖ್ಯಾಧಿಕಾರಿ ಚಂದನ್, ಮುಖಂಡರಾದ ವೀರೇಶ್ ಮೇಸಿ, ಎಚ್.ಗಣಪತಿ, ಎಂ.ಡಿ.ಶೇಖರ್, ಪರಶುರಾಮ್, ಕೆ.ನಾಗರಾಜ್, ನಾಗರಾಜ್, ಶ್ರೀಕಾಂತ್, ಕೆ.ವಿ.ಗೌಡ, ಶಿವಣ್ಣ ಇತರರಿದ್ದರು.
ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯು ಎರಡು ವರ್ಷ ಶಿಕ್ಷಣದಲ್ಲಿ ಹರ್ಷ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಮೇ 29ರಂದು ಶಾಲೆ ಪ್ರಾರಂಭವಾಗಲಿದ್ದು, 30ರಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಲ್ಲ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಇಲಾಖೆಗೆ ಸೂಚಿಸಲಾಗಿದೆ. ಎಸ್.ಮಧು ಬಂಗಾರಪ್ಪ, ಸಚಿವ