ಆರ್ಥಿಕ ಬೆಳವಣಿಗೆಯಲ್ಲಿ ರೈತರ ಕೊಡುಗೆ ಅಪಾರ, ಬರೋಡಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಖುರಾನಾ ಅಭಿಮತ

18 jh 3
Published on

ಜಡಿಗೇನಹಳ್ಳಿ: ದೇಶದ ಆರ್ಥಿಕ ಬೆಳವಣಿಗೆಯಲ್ಲಿ ರೈತರ ಕೊಡುಗೆ ಪ್ರಶಂಸಿಸಿ ಅಭಿನಂದಿಸುವ ಹಾಗೂ ಉತ್ತೇಜಿಸುವ ನಿಟ್ಟಿನಲ್ಲಿ ಬ್ಯಾಂಕ್ ಆ್ ಬರೋಡಾ ರೈತ ದಿವಸ್ ಆಚರಿಸುತ್ತಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಖುರಾನಾ ತಿಳಿಸಿದರು.

ಆಲಗೊಂಡಹಳ್ಳಿಯಲ್ಲಿ ಸೋಮವಾರ ಬ್ಯಾಂಕ್ ಆ್ ಬರೋಡಾ ಆಯೋಜಿಸಿದ್ದ ರೈತ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಬಂದು 75 ವರ್ಷದ ಹಿನ್ನೆಲೆ ಬರೋಡಾ ಬ್ಯಾಂಕ್ ದೇಶವ್ಯಾಪಿ ರೈತ ದಿವಸ ಆಚರಣೆಗೆ ಮುಂದಾಗಿದೆ. ಅ.16 ವಿಶ್ವ ಆಹಾರ ದಿನದಂದು ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಹಂತ ಹಂತವಾಗಿ ದೇಶದೆಲ್ಲೆಡೆ ಡಿ.31ರವರೆಗೆ ಆಚರಿಸಿ ರೈತರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದರು.

ಕೃಷಿ ಮಾರುಕಟ್ಟೆ, ಸಂಸ್ಕರಣ ಕೇಂದ್ರಗಳನ್ನು ಆರಂಭಿಸಿ ರೈತರಿಗೆ ಉತ್ತೇಜನ ನೀಡುವ ಮೂಲಕ ರೈತರ ಅಭಿವೃದ್ಧಿಗೆ ಬ್ಯಾಂಕ್ ಶ್ರಮಿಸುತ್ತಿದೆ ಎಂದರು.

ಬೆಂಗಳೂರು ವಲಯ ಪ್ರಬಂಧಕ ಸುಧಾಕರ ಡಿ.ಎ.ನಾಯಕ್ ಮಾತನಾಡಿ, ರೈತರ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಕೃಷಿ ಕ್ಷೇತ್ರ ಅಭ್ಯುದಯಕ್ಕೆ ಆದ್ಯತೆ ನೀಡಿದೆ. ಕೃಷಿ ಉತ್ಪನ್ನಗಳಿಗೆ ಹಣಕಾಸು ನೆರವು ಒದಗಿಸುವುದು, ಕೃಷಿ ಮಾರ್ಕೆಟಿಂಗ್ ಚಟುವಟಿಕೆಗೆ ಹೆಚ್ಚಿನ ಗಮನ, ಕ್ರೆಡಿಟ್ ಖಾತೆ ನಿರ್ವಹಿಸುವ ತಿಳಿವಳಿಕೆ, ತರಬೇತಿ ಪಡೆದ ಮಾನವ ಶಕ್ತಿಯ ಬೆಳವಣಿಗೆಗೆ ಪೂರಕವಾಗಿ ಶಕ್ತಿ ತುಂಬುವುದು, ಸ್ಥಳೀಯ ಸಂಸ್ಥೆಗಳೊಂದಿಗಿನ ಸಹಯೋಗ ಉತ್ತೇಜಿಸುವುದು ಬ್ಯಾಂಕ್‌ನ ಉದ್ದೇಶವಾಗಿದೆ ಎಂದರು.

ರೈತರಿಗೆ ವಿವಿಧ ಯೋಜನೆಗಳ ಸಾಲಸೌಲಭ್ಯ ವಿತರಿಸಲಾಯಿತು. ಕೃಷಿ ರಂಗದಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು. ಕೃಷಿ ಉಪಕರಣಗಳು, ಉತ್ತಮ ತಳಿಯ ಹಸು, ಕುರಿ-ಮೇಕೆ, ಸಾವಯವ ಕೃಷಿಗೊಬ್ಬರ, ನೈಸರ್ಗಿಕವಾಗಿ ತಯಾರಿಸಲ್ಪಟ್ಟ ಕ್ರಿಮಿನಾಶಕ ಕುರಿತು ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.

ಶಿಬಿರ ಮುಖ್ಯಸ್ಥ ಉದಯ್ ಹೆಗ್ಡೆ, ದೊಡ್ಡನಲ್ಲಾಳ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net