ಆರ್ಥಿಕ ಪ್ರಗತಿ ಸಾಧಿಸುವ ಸಂಕಲ್ಪ ಮಾಡಿ

08arsph1ep
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜಿ.ಅನಿತಾ ಉದ್ಘಾಟಿಸಿದರು. ರಮ್ಯಾ ವಿಭಾ ವಿ ರಾಥೋಡ್, ಸುಧಾ ಕಲ್ಯಾಣ್,ಕವಿತಾ ಹಾಜರಿದ್ದರು.
Published on

ಅರಸೀಕೆರೆ: ಮಹಿಳೆಯರ ಹಕ್ಕುಗಳ ರಕ್ಷಣೆಗೆ ಕಾನೂನು ಅರಿವಿನ ಅಗತ್ಯವಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಜಿ.ಅನಿತಾ ಹೇಳಿದರು.

ನಗರದ ಚಂದನಾ ವಿದ್ಯಾಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಣ್ಣ, ಪುಟ್ಟ ಕೌಟುಂಬಿಕ ಕಲಹಗಳಿಗೆ ಕುಳಿತು ಪರಿಹಾರ ಕಂಡುಕೊಳ್ಳುವ ಅವಕಾಶವಿದೆ. ದೌರ್ಜನ್ಯ, ಹಲ್ಲೆಯಂತಹ ಘಟನೆಗಳು ನಡೆದಲ್ಲಿ ಕಾನೂನಿನ ನೆರವು ಪಡೆಯಬಹುದು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾಗಿ ದುಡಿಯುವ ಸಾಮರ್ಥ್ಯ ಹೊಂದಿದ್ದಾಳೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ದೊರೆಯವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಲು ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ಮತದಾನ ಜಾಗೃತಿ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ನ್ಯಾಯಾಧೀಶೆ ರಮ್ಯಾ, ತಹಸೀಲ್ದಾರ್ ವಿಭಾ ವಿ.ರಾಥೋಡ್, ವಕೀಲರಾದ ನಟರಾಜ್, ಪ್ರಕಾಶ್, ತಾಪಂ ಸಹಾಯಕ ನಿರ್ದೇಶಕ ವಿನಯ್, ಉಪನ್ಯಾಸಕಿ ಸುಧಾ ಕಲ್ಯಾಣ್ ಮಾತನಾಡಿದರು. ಚಂದನಾ ವಿದ್ಯಾಸಂಸ್ಥೆಯ ಕವಿತಾ, ಶಿಕ್ಷಕಿ ಮಧು ಮಾಲತಿ, ಪ್ರಾಂಶುಪಾಲ ತೀರ್ಥಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net