

ಯಾದಗಿರಿ: ಕರೊನಾ ಲಾಕ್ಡೌನ್ನಿಂದ ಸಂತ್ರಸ್ತ ಕೂಲಿಕಾಮಿಕರಿಗೆ ಪರಿಹಾರ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಕಾರ್ಮಿಕರಿಗೆ ಪರ್ಯಾಯ ನೀತಿಗಳನ್ನು ರೂಪಿಸುವಂತೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿಯಿಂದ ಶುಕ್ರವಾರ ಇಲ್ಲಿನ ಜಿಲ್ಲಾಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಕಾರ್ಯದರ್ಶಿ ಅನಿತಾ ಹಿರೇಮಠ ಮಾತನಾಡಿ, ಸಕರ್ಾರ ಕೋವಿಡ್-19ನಿಂದಾಗಿ ಹೇರಿಕೆ ಮಾಡಿದ್ದ ಲಾಕ್ಡೌನ್ ಇದೀಗ ತೆರವುಗೊಳಿಸಿದ್ದು, ಸಂತ್ರಸ್ತರಾದ ಕಾರ್ಮಿಕರಿಗೆ ಸಮರ್ಪಕ ಪರಿಹಾರ ನೀಡಿಲ್ಲ ಮತ್ತು ಆರ್ಥಿಕ ಪುನಶ್ಚೇತನಕ್ಕೆ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಕೆಲಸದ ಅವ ಹೆಚ್ಚಳಗೊಳಿಸಿದ್ದನ್ನು ಹಿಂಪಡೆಯಬೇಕು. ಕೈಗಾರಿಕಾ ವಿವಾದಗಳ ಕಾಯ್ದೆ 5 'ಬಿ' ಗೆ ತಿದ್ದುಪಡಿ ಹಾಗೂ ಗುತ್ತಿಗೆ ಕಾರ್ಮಿಕರಿಗೆ ನೇಮಕಾತಿಗೆ ಪರವನಾಗಿ ಮಿತಿ 20ರಿಂದ 50ಕ್ಕೆ ಹೆಚ್ಚಳ ತಿದ್ದುಪಡಿಗಳ ಸುಗ್ರೀವಾಜ್ಞೆ ಕೈಬಿಡಬೇಕು. ಲಾಕ್ಡೌನ್ ಅವಯ ವೇತನವನ್ನು ಕಾರ್ಮಿಕರಿಗೆ ಪೂರ್ಣವಾಗಿ ಪಾವತಿಸಬೇಕು. ಕೋವಿಡ್ ಸೋಂಕು ತಗುಲಿದಾಗ. ಹೋಮ್ ಕ್ವಾರಂಟೈನ್ ಆದಾಗ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಾಲಿಬ್ ಸಾಬ ಬೆಳಗೇರಾ, ತಾಲೂಕು ಅದ್ಯಕ್ಷ ಬಸವರಾಜ ದೊರೆ, ಕವಿತಾ, ಸರೋಜಾ, ರಾಜೇಶ್ವರಿ ವಡ್ಡನಳ್ಳಿ ಇದ್ದರು.