

ಯಾದಗಿರಿ: ರಾಜ್ಯದ ಆರ್ಥಿಕ ಏರಿಕೆಯಲ್ಲಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಹಾಗೂ ತೆರಿಗೆದಾರರ ಪಾಲು ಪ್ರಮುಖವಾಗಿದೆ ಎಂದು ಜಿ¯್ಲÁ ಕಾನೂನು ಸೇವಾ ಪ್ರಾಧಿಕಾರ ಹಿರಿಯ ಸಿವಿಲï ನ್ಯಾಯಾಧೀಶ ಮತ್ತು ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆ, ತೆರಿಗೆದಾರರ ಸಂಘ ಹಮ್ಮಿಕೊಂಡಿದ್ದ ಜಿಎಸ್‌ಜಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ೩೨ ಜಿ¯್ಲೆಗಳಲ್ಲಿ ಈ ಇಲಾಖೆ ಮೈತುಂಬಾ ಕಣ್ಣಾಗಿಸಿಕೊಂಡು ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಬರಬೇಕಾದ ತೆರಿಗೆ ಸಂಪೂರ್ಣವಾಗಿ ಸಂಗ್ರಹ ಮಾಡುತ್ತದೆ. ಇದು ಒಂದು ನಮೂನಿ ಸರ್ಕಾರದ ಚಾಲನಾ ಶಕ್ತಿಯಂತೆಯೇ ಇದೆ ಎಂದರು. ಕಲಬುರಗಿ ಜೆಸಿಸಿಟಿ ಜಾರಿ ನಿರ್ದೇಶಕರಾದ ಯಾಸ್ಮಿನ್ ವಾಲಿಕಾರ್ ಮಾತನಾಡಿ, ಸರ್ಕಾರ ನಿಗದಿ ಮಾಡುವ ವಾರ್ಷಿಕ ತೆರಿಗೆ ಸಂಗ್ರಹ ಗುರಿ ಸಕಾಲಕ್ಕೆ ಮುಟ್ಟುವ ಮೂಲಕ ಕರ್ತವ್ಯ ಪೂರ್ಣಗೊಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಎಗಳಾದ ಶಶಿಧರ ಪಾಟೀಲï, ವಿವೇಕ್ ಎನ್., ಜಿ¯್ಲÁ ತೆರಿಗೆ ಸಲಹೆಗಾರ ಸಂಘ ಅಧ್ಯP್ಷÀ ನಾಗಪ್ಪ ಮೋಗ್ದಮ, ಜಿ¯್ಲÁ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯP್ಷÀ ದಿನೇಶಕುಮಾರ ಜೈನ್, ಚನ್ನಮಲ್ಲಿಕಾರ್ಜುನ ಅಕ್ಕಿ ಇತರರಿದ್ದರು.