ಆರ್​ಟಿಸಿ ಉತಾರ ಸರಿಪಡಿಸಲು ರೈತ ಸಂಟನೆಗಳಿಂದ ಪ್ರತಿಭಟನೆ

4
ಬೈಲಹೊಂಗಲದಲ್ಲಿ ಪ್ರತಿಭಟನಾನಿರತ ರೈತರೊಂದಿಗೆ ಎಸಿ ಪ್ರಭಾವತಿ ಕೀರಪುರ ಚರ್ಚಿಸಿದರು. ಧರ್ಮರಾಜ ಗೌಡರ, ಸೋಮಪ್ಪ ಮುರಗೋಡ ಇತರರು ಇದ್ದರು.
Published on

ಬೈಲಹೊಂಗಲ: ಸಮೀಪದ ಮಲ್ಲೂರ, ಕಾಗಿಹಾಳ ತಾಂಡಾ, ಕಾರ್ಲಕಟ್ಟಿ ಗ್ರಾಮಗಳ ಗುಡ್ಡದ ಹೊಲಗಳ ಒಂದುಗೂಡಿಸಿರುವ ಆರ್​ಟಿಸಿ ಉತಾರ ಸರಿಪಡಿಸಬೇಕು ಎಂದು ಒತ್ತಾಯಿಸಿ ರೈತ ಸಂಟನೆಗಳಿಂದ ಸೋಮವಾರ ಬೃಹತ್​ ಪ್ರತಿಭಟನೆ ಜರುಗಿತು.

ಪಟ್ಟಣದ ಕಿತ್ತೂರು ಚನ್ನಮ್ಮ ವತ್ತದಿಂದ ಪ್ರತಿಭಟನಾ ಮೆರವಣಿಗೆ ಎಪಿಎಂಸಿ, ಇಂಚಲ ರಸ್ತೆ, ಬಸ್​ ನಿಲ್ದಾಣವರೆಗೆ ತಲುಪಿತು. ರಸ್ತೆ ತಡೆ ನಡೆಸಿ ಸರ್ಕಾರ, ಜನಪ್ರತಿನಿದಿಗಳು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು. ಇದರಿಂದಾಗಿ ಸುಮಾರು ಒಂದು ಗಂಟೆ ಸಂಚಾರ ದಟ್ಟಣೆ ಉಂಟಾಯಿತು. ಸಿಪಿಐ ಪಂಚಾರಿ ಸಾಲಿಮಠ ಪ್ರತಿಭಟನಾಕಾರರ ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನೇಗಿಲಯೋಗಿ ಸುರಾ ರೆತ ಸಂದ ಅಧ್ಯ ಧರ್ಮರಾಜ ಗೌಡರ, ರೈತರಾದ ಸೋಮಪ್ಪ ಮುರಗೋಡ, ಬಸನಗೌಡ ಪಾಟೀಲ ಮಾತನಾಡಿ, 2019&20ರಲ್ಲಿ ಬೇರೆ, ಬೇರೆ ಇದ್ದ ರೆತರ ಉತಾರಗಳನ್ನು 2023ರಲ್ಲಿ ಒಟ್ಟುಗೂಡಿಸಿ, ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಸರ್ವೇ ಉತಾರ ಪಡೆಯಲು ಹೋದರೆ 44 ಜನ ರೈತರ ಹೆಸರುಗಳು ಒಟ್ಟಿಗೆ ಬರುತ್ತಿವೆ. ಇದರಿಂದ ರೈತರನ್ನು ಗೊಂದಲಕ್ಕೀಡು ಮಾಡಿದ್ದಂತಾಗಿದೆ. ಸರ್ವೇ ಉತಾರದಲ್ಲಿ ನಂ.3 ಮತ್ತು 4ರಲ್ಲಿ 44 ಜನ ರೆತರ ವಾರಸಾ ದಾಖಲು, ಹದ್ದು ಹೆಸರು ಸೇರ್ಪಡೆ ಆಗಿವೆ. ಒಬ್ಬ ರೈತ ಬಸ್ತಿ, ವಾಟ್ನಿ, ಪೋಡಿ ಮಾಡುವುದಕ್ಕೆ ತುಂಬ ತೊಂದರೆ ಪಡುವಂತಾಗಿದೆಂದು ಆಕ್ರೋಶ ವ್ಯಕ್ತಪಡಿಸಿದರು. ಬೈಲಹೊಂಗಲದಲ್ಲಿ ಪ್ರತಿಭಟನಾನಿರತ ರೈತರೊಂದಿಗೆ ಎಸಿ ಪ್ರಭಾವತಿ ಕೀರಪುರ ಚರ್ಚಿಸಿದರು. ಧರ್ಮರಾಜ ಗೌಡರ, ಸೋಮಪ್ಪ ಮುರಗೋಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net