

ಕಲಬುರಗಿ: ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವ ಬಹುತೇಕರಿಗೆ ಕಾಮಗಾರಿಯ ಜ್ಞಾನವೇ ಇರುವುದಿಲ್ಲ. ಆದರೆ ಅಧಿಕಾರಿಗಳು ಹೆದರಿಕೆಯಿಂದ ಸಮಸ್ಯೆ ಸೃಷ್ಟಿಸಿಕೊಳ್ಳುತ್ತಾರೆ. ಹಿರಿಯ ಅಧಿಕಾರಿಗಳ, ಸಹೋದ್ಯೋಗಿಗಳ ಪರಸ್ಪರ ಸಹಕಾರವಿರಲ್ಲ. ಆರ್‌ಟಿಐ ಮಾಹಿತಿ ಇರಲ್ಲ. ಅದಕ್ಕೆ ಬ್ಲಾÈಕ್‌ಮೇಲ್‌ಗೆ ಒಳಗಾಗುತ್ತೀರಿ ಎಂದು ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಧಾಕಪ್ಪ ಹೇಳಿದರು.
ನಗರದ ಲೋಕೋಪಯೋಗಿ ಭವನದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಹಿತಿ ಹಕ್ಕು ಅಧಿನಿಯಮ-೨೦೦೫ ರ ಕಾಯ್ದೆ ಅನುಷ್ಠಾನ ಕುರಿತು ಲೋಕೋಪಯೋಗಿ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ (ಪಿಐಒ) ಸಂವಾದದಲ್ಲಿ ಮಾತನಾಡಿದರು.
ಆರ್‌ಟಿಐನಲ್ಲಿ ಅಧಿಕಾರಿಗಳಿಗೆ ಹಲವು ಅಧಿಕಾರಿಗಳಿವೆ. ಆದರೆ ಅದರ ಬಗ್ಗೆ ಕನಿಷ್ಠ ಅಧ್ಯಯನವನ್ನು ಮಾಡಲ್ಲ. ಯೋಚನೆಯನ್ನೂ ಮಾಡಲ್ಲ. ಬೆಂಗಳೂರಿಗೆ ಹಲವು ಬಾರಿ ಬರುವ ಪಿಐಒಗಳು ಒಂದು ದಿನವೂ ಮಾಹಿತಿ ಹಕ್ಕು ಆಯೋಗದತ್ತ ಸುಳಿಯಲ್ಲ. ಮಾಹಿತಿ ಕೊರತೆಯಿಂದ ನಿತ್ಯ ಸವಾಲು ಸೃಷ್ಟಿಸಿಕೊಳ್ಳುತ್ತೀರಿ ಎಂದು ಹೇಳಿದರು.
ಒಬ್ಬ ವ್ಯಕ್ತಿ ಹತ್ತಾರು ವಿಷಯ, ಕಾಮಗಾರಿಯ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದರೆ `ಅಷ್ಟು ದಾಖಲೆ ನೀಡಲು ಆಡಳಿತಾತ್ಮಕವಾಗಿ ಶಕ್ತವಾಗಿಲ್ಲ ಎಂದು ಮಾಹಿತಿ ಆಯೋಗಕ್ಕೆ ನೀವೆ ತಿಳಿಸಿ. ಅದನ್ನು ಆಯೋಗ ನೋಡಿಕೊಳ್ಳುತ್ತದೆ. ೩೦ ದಿನದಲ್ಲಿ ಅಧಿಕಾರಿಗಳು ಉತ್ತರ ನೀಡಿದಂತೆ ಆಗುತ್ತದೆ. ವಿನಾಕಾರಣ ವಿಳಂಬ ಮಾಡುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಹೇಳಿದರು.
ಇಲ್ಲೆ ಇದೆ ಬನ್ನಿ: ೨೦೧೯ರಲ್ಲಿ ಕಲಬುರಗಿಯಲ್ಲಿ ಮಾಹಿತಿ ಆಯೋಗದ ಪೀಠ ಆರಂಭವಾಗಿದೆ. ಆದರೆ ಅಧಿಕಾರಿಗಳು ವಿಚಾರಣೆಗೆ ಬರುವುದಿಲ್ಲ. ಪಿಡಬ್ಲೂಡಿ ಭವನದಲ್ಲಿ ಕಚೇರಿಗೆ ಅವಕಾಶ ಕೇಳಲಾಗಿತ್ತು ಕೊಡಲಿಲ್ಲ. ಇದೀಗ ಪಿಡಬ್ಲೂಡಿ ಅತಿಥಿ ಗೃಹದಲ್ಲಿಯೇ ಕಚೇರಿ ಇದ್ದು, ವಿಚಾರಣೆಗೆ ಬನ್ನಿ, ಮಾಹಿತಿ ದೊರೆಯುತ್ತದೆ. ಹಿಂದೆ ಬೆಂಗಳೂರಿಗೆ ಬರೋದು ಕಷ್ಟವಾಗಿತ್ತು ಎಂದರು.
ಪಿಡಬ್ಲೂಡಿ ಈಶಾನ್ಯ ವಲಯದ ಚೀಫ್ ಇಂಜನಿಯರ್ ಜಗನ್ನಾಥ ಹಲಿಂಗೆ, ಅಧೀಕ್ಷಕ ಅಭಿಯಂತರರು ಅಮೀರ್ ಮುಕ್ತಾರ್ ಅಹ್ಮದ್, ಇಇಗಳಾದ ಸುಭಾಷ, ಅಭಿಮನ್ಯು, ಡಿಎಲ್ ಗಾಜರೆ, ಶಿವಶಂಕರ ಕಾಮಶೆಟ್ಟಿ, ಹೇಮರಾಜ, ಹೇಮಂತರಾಜ, ಶಂಕರ, ದೇವದಾಸ, ಡೆಪ್ಯೂಟಿ ಅಂಬರೀಶ ರೋಟ್ನಡಗಿ, ನಿಬಂಧಕರಾದ ಭೀಮಣ್ಣ ನಾಯಕ, ಮಹಾಂತೇಶ ರೋಡಗಿ, ಅಧೀಕ್ಷಕ ಅಬ್ದುಲ್ ರೌಫ್ ಇತರರಿದ್ದರು.