ಆರ್ಜಿ ವಸತಿ ಶಾಲೆಯಲ್ಲಿ ಚುನಾವಣೆ

Vpt-01-15
Published on

ಕೊಡಗು: ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ಸಂಸತ್ ರಚನೆಗಾಗಿ ಎರಡು ದಿನ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.

ಮೊದಲ ದಿನ ಸುಮಾರು 34 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಆಗಿದ್ದ ಪ್ರಾಂಶುಪಾಲೆ ಮಮತಾ ನಾಮಪತ್ರ ಪರಿಶೀಲಿಸಿ 28 ನಾಮಪತ್ರ ಸ್ವೀಕೃತಗೊಂಡವು. ನಂತರ ವಿದ್ಯಾರ್ಥಿಗಳು ಚುನಾವಣಾ ಪ್ರಚಾರ ಕೈಗೊಂಡರು. ಎರಡನೇ ದಿನ ಮತದಾನ ನಡೆಸಲಾಯಿತು. ಇವಿಎಂನಲ್ಲಿ ವಿದ್ಯಾರ್ಥಿಗಳು ಮತ ಚಲಾಯಿಸಿದರು.

ಹತ್ತನೇ ತರಗತಿಯಲ್ಲಿ 4, 9ನೇ ತರಗತಿಯಲ್ಲಿ 4 , 8ನೇ ತರಗತಿಯಲ್ಲಿ 4, 7ನೇ ತರಗತಿಯಲ್ಲಿ 3, 6ನೇ ತರಗತಿಯಲ್ಲಿ 3 ವಿದ್ಯಾರ್ಥಿಗಳು ಚುನಾಯಿತರಾದರು. ಎರಡು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಚುನಾವಣಾಧಿಕಾರಿಯಾಗಿ ಪ್ರಾಂಶುಪಾಲೆ ಮಮತಾ, ರಿಟನಿರ್ಂಗ್ ಆಫೀಸರ್ ಆಗಿ ಸಮಾಜ ವಿಜ್ಞಾನ ಶಿಕ್ಷಕ ಸಿ.ನಟರಾಜ ಹಾಗೂ ಶಿವನಂಜಯ್ಯ, ನಾಗಮಣಿ, ಜೆ.ಚಂದ್ರ, ಪುಟ್ಟಸ್ವಾಮಿ, ಪ್ರಕಾಶ್‌ರಾಜ್, ಮನುಕುಮಾರ್, ಸುಮಿತ್ರಾ ಮತ್ತಿತರರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ನಂತರ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾಯಿತ ವಿದ್ಯಾರ್ಥಿಗಳಿಗೆ ವಿವಿಧ ಖಾತೆ ಹಂಚಲಾಯಿತು.

ಖಾತೆ ಹಂಚಿಕೆ: ಶಂಶಾಕ್ ರಾಜ್ಯಪಾಲರಾಗಿ ನೇಮಕಗೊಂಡರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡರು. ಉಳಿದಂತೆ
ಯಶ್ಮಿತಾ (ಗೃಹಸಚಿವೆ), ಭೂಮಿಕಾ (ಹಣಕಾಸು), ದಿಗಂತ್ (ಆರೋಗ್ಯ), ಅಜಯ್ (ಆಹಾರ ಮತ್ತು ನಾಗರಿಕ)
ಪ್ರಿಯಾಂಕ (ಮಹಿಳಾ ಮತ್ತು ಮಕ್ಕಳು), ಹಷಾರ್ಂತ್ (ವಾರ್ತಾ ಮತ್ತು ಪ್ರಸಾರ), ಸಾಹಿತ್ಯ (ಶಿಕ್ಷಣ), ಲೋಲಾಕ್ಷಿ (ತೋಟಗಾರಿಕೆ), ವಿನೋದ್ (ನೀರಾವರಿ), ರೋಷನ್ (ಇಂಧನ), ಮಿಲನ್ (ಕನ್ನಡ ಮತ್ತು ಸಂಸಂಸ್ಕೃತಿ), ಪ್ರೀತಂ (ಪೌರಾಡಳಿತ), ಸೃಷ್ಟಿ (ವಿಜ್ಞಾನ ಮತ್ತು ತಂತ್ರಜ್ಞಾನ) ಸಚಿವರಾಗಿ ಆಯ್ಕೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net