ಆರ್‌ಐಎಚ್ ಆಸ್ಪತ್ರೆಗೆ ಹೊದಿಕೆ ಹಸ್ತಾಂತರ

1 SIDDA PURA
ಆರ್‌ಐಎಚ್ ಆಸ್ಪತ್ರೆಗೆ ಎ.ಕುಶಾಲಪ್ಪ ಹೊದಿಕೆಗಳನ್ನು ನೀಡಿದರು. ಡಾ.ಚಂದ್ರು ಇದ್ದರು.
Published on

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಪಟ್ಟಣದ ಆರ್‌ಐಎಚ್ ಆಸ್ಪತ್ರೆಗೆ ರಿ ಬಿಲ್ಡ್ ಕೊಡಗು ಸಂಸ್ಥಾಪಕ ಕೆ.ಎ.ಕುಶಾಲಪ್ಪ ತನ್ನ ತಂದೆ ದಿ. ಕೆ.ಪಿ.ಅಯ್ಯಪ್ಪ ಹೆಸರಿನಲ್ಲಿ ಅರವತ್ತು ಹೊದಿಕೆ ನೀಡಿದರು.

ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ಡಾ.ಚಂದ್ರು ಅವರಿಗೆ ಹೊದಿಕೆಗಳನ್ನು ಹಸ್ತಾಂತರ ಮಾಡಿ ಮಾತನಾಡಿದ ಕುಶಾಲಪ್ಪ, ಸಮಾಜಕ್ಕೆ ಒಳಿತು ಮಾಡುವ ಉದ್ದೇಶದಿಂದ ರೋಗಿಗಳಿಗೆ ಉಪಯುಕ್ತವಾಗುವ ಹೊದಿಕೆಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಹೇಳಿದರು.

ಡಾ.ಚಂದ್ರು ಮಾತನಾಡಿ, ಮಾನವೀಯ ನೆಲೆಗಟ್ಟಿನಲ್ಲಿ ಸಹಕಾರ ನೀಡಿದರೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದರು
ರಿ ಬಿಲ್ಡ್ ಸಂಸ್ಥೆಯ ಸಂಚಾಲಕರಾದ ಪಾಲಂದಿರ ರಾಧಾ, ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net