ಆರ್‌ಎಸ್‌ಎಸ್ ಹಿರಿಯ ಸ್ವಯಂ ಸೇವಕ ಪಾರಸ್‌ಮಲ್ ನಿಧನ

ಆರ್‌ಎಸ್‌ಎಸ್ ಹಿರಿಯ ಸ್ವಯಂ ಸೇವಕ ಪಾರಸ್‌ಮಲ್ ನಿಧನ
Published on

ಹಾಸನ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಾಸನ ವಿಭಾಗದ ಕಾರ್ಯಕಾರಿಣಿ ಸದಸ್ಯರು ಹಾಗೂ ನಗರದ ಪ್ರವೀಣ್ ಸೆಲೆಕ್ಷನ್ ಬಟ್ಟೆ ಅಂಗಡಿ ಮಾಲೀಕರಾದ ಪಾರಾಸ್‌ಮಲ್(75) ತೀವ್ರ ಹೃದಯಾಘಾತದಿಂದ ನಿಧನರಾದರು.
ಸಂಘದ ಹಿರಿಯರು, ಕಠಿಣ ಸಂದರ್ಭದಲ್ಲಿ ಹಾಸನದಲ್ಲಿ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿ ತುರ್ತು ಪರಿಸ್ಥಿತಿ ಸಮಯದಲ್ಲಿ ಒಂದೂವರೆ ವರ್ಷಗಳ ಕಾಲ ಜೈಲು ವಾಸ ಅನುಭವಿದ್ದರು.
ರಾಷ್ಟ್ರ ಕಾರ್ಯದಲ್ಲಿ ಇಳಿ ವಯಸ್ಸಿನಲ್ಲೂ ಚುರುಕಾಗಿ ಓಡಾಟ ಮಾಡುತ್ತಾ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದರು ಎಂದು ಅನೇಕರು ಅವರ ದೇಶಸೇವೆ ಕಾರ್ಯವನ್ನು ಸ್ಮರಿಸಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ ಆಗಲಿದ್ದಾರೆ. ಹಿರಿಯರ ನಿಧನಕ್ಕೆ ಹಾಸನ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಪಾರಸ್‌ಮಲ್ ನಿಧನದಿಂದ ಹಿಂದೂ ಸಂಘಟನೆಯ ಒಬ್ಬ ಹಿರಿಯ ಮುಖಂಡರನ್ನು ಕಳೆದು ಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net