ಆರ್‌ಎಲ್ ಲಾ ಕಾಲೇಜು ವಿದ್ಯಾರ್ಥಿಗಳು ಪ್ರಥಮ

14Ravig6
ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಾನೂನು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳೊಂದಿಗೆ ಕರ್ನಾಟಕ ಕಾನೂನು ಸಂಸ್ಥೆ ಅಧ್ಯಕ್ಷ ಅನಂತ ಮಂಡಗಿ,ಪಿ.ಎಸ್.ಸಾವ್ಕರ್, ಎಂ.ಆರ್.ಕುಲಕರ್ಣಿ, ಎ.ಎಚ್.ಹವಾಲ್ದಾರ್, ಪ್ರೊ.ಚೇತನಕುಮಾರ, ಪ್ರೊ.ಟಿ.ಎಂ ಹರ್ಷ ಇದ್ದಾರೆ.
Published on

ಬೆಳಗಾವಿ: ಬೆಂಗಳೂರಿನ ಅರುಣೋದಯ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಸಹಯೋಗದಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಇತ್ತೀಚೆಗೆ ಆಯೋಜಿಸಿದ್ದ ಅತ್ಯುತ್ತಮ ಗ್ರಾಮೀಣ ಕಾನೂನು ಮತ್ತು ಕ್ಲಿನಿಕ್ ಸ್ಪರ್ಧೆಯಲ್ಲಿ ಬೆಳಗಾವಿ ಕೆಎಲ್‌ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದಿದ್ದಾರೆ. ವಿಜೇತ ತಂಡದಲ್ಲಿ ಕಾರ್ತಿಕ ತೊಲಗಟ್ಟಿ, ಅನಿಲ ಗಿಡ್ಡಗೌಡರ, ಲಕ್ಷ್ಮೀ ಪೂಜಾರ, ರುಚಾ ಅಷ್ಟಪುತ್ರೆ, ಶುಭಾಂಗಿ ಪಾಟೀಲ, ಮಲಿಕಾರ್ಜುನ ಪೂಜಾರಿ, ಸುಜಿತ್ ಕದಂ ಮತ್ತು ಶಿವಾನಂದ ಬಿಜ್ಜರಗಿ ಇದ್ದರು.

ವಿದ್ಯಾರ್ಥಿಗಳ ಸಾಧನೆಗೆ ಕರ್ನಾಟಕ ಕಾನೂನು ಸಂಸ್ಥೆ ಅಧ್ಯಕ್ಷ ಅನಂತ ಮಂಡಗಿ, ಕಾರ್ಯಾಧ್ಯಕ್ಷ ಪಿ.ಎಸ್.ಸಾವ್ಕರ್, ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಎ.ಎಚ್.ಹವಾಲ್ದಾರ್, ಕಾನೂನು ನೆರವು ಇಲಾಖೆ ಸಮನ್ವಯಾಧಿಕಾರಿ ಪ್ರೊ.ಚೇತನಕುಮಾರ, ಪ್ರೊ.ಟಿ.ಎಂ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net