ಆರ್‌ಎಂಜಿಎನ್ ಸೇವೆ ಅವಿಸ್ಮರಣೀಯ

ydg3
ಸುರಪುರದಲ್ಲಿ ಶನಿವಾರ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಡಾ.ಅಬ್ದುಲ್ ರಬ್ ಉಸ್ತಾದ್, ಮಲ್ಲಯ್ಯ ಕಮತಗಿ, ವೆಂಕಟಗಿರಿ ದೇಶಪಾಂಡೆ, ರಾಜಾ ಮುಕುಂದ ನಾಯಕ, ಬಸವರಾಜ ಜಮದ್ರಖಾನಿ, ಡಾ.ಮಲ್ಲಿಕಾರ್ಜುನ ಕಮತಗಿ, ಮೇಘನಾಥ ಅಬ್ರಾಹಂ ಬೆಳ್ಳಿ ಇತರರಿದ್ದರು.
Published on

ಸುರಪುರ: ಕಲೆ, ಸಾಹಿತ್ಯ, ಕ್ರೀಡೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಬೆಳೆಸಿದ ಮಾಜಿ ಸಚಿವ, ಸಗರನಾಡಿನ ಸಾಂಸ್ಕೃತಿಕ ರಾಯಭಾರಿ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾಗಿದ್ದ ರಾಜಾ ಮದನಗೋಪಾಲ ನಾಯಕ ಅವರ ಸೇವೆ ಅವಿಸ್ಮರಣೀಯವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಉರ್ದು ಮತ್ತು ಪರ್ಶಿಯನ್ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ ರಬ್ ಉಸ್ತಾದ್ ಹೇಳಿದರು.

ಇಲ್ಲಿಯ ಕನ್ನಡ ಸಾಹಿತ್ಯ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಮಾಜಿ ಸಚಿವ ರಾಜಾ ಮದಗೋಪಾಲ ನಾಯಕ (ಆರ್‌ಎಂಜಿಎನ್)ರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 80 ವರ್ಷ ಇತಿಹಾಸದ ತಾಲೂಕಿನ ಕನ್ನಡ ಸಾಹಿತ್ಯ ಸಂಘವನ್ನು ಹೆಮ್ಮರವಾಗಿ ಬೆಳೆಸಿದ ಕೀರ್ತಿ ದಿವಂಗತರಿಗೆ ಸಲ್ಲುತ್ತದೆ. ಎಲ್ಲರನ್ನು ಜತೆಯಲ್ಲಿ ಕರೆದೊಯ್ಯುತ್ತಿದ್ದ ಅವರು ಸದಾ ನಮ್ಮೆಲ್ಲರ ಮನಸ್ಸು ಮತ್ತು ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಸ್ಮರಿಸಿದರು.

ಪ್ರಗತಿಪರ ಚಿಂತಕ ಮಲ್ಲಯ್ಯ ಕಮತಗಿ ಮಾತನಾಡಿ, ಸರಳ ಸ್ವಭಾವದ ಆರ್‌ಎಂಜಿಎನ್ ವಿದ್ಯಾರ್ಥಿ ಜೀವನದಲ್ಲೇ ಸ್ಟೂಡೆಂಟ್ ಲೀಡರ್ ಆಗಿದ್ದರು. ಉತ್ತಮ ಕ್ರೀಡಾಪಟು ಕೂಡ ಆಗಿದ್ದ ಅವರು ರಾಜ್ಯ ಮಟ್ಟದ ಹಾಕಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜನಪ್ರತಿನಿಧಿಯಾಗಿ ಅಪಾರ ಜನ ಸೇವೆ ಮಾಡಿದ್ದ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹಸನಾಪುರದ ಪಿಎಚ್‌ಸಿಯಂಥ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದರು.
ಬಹುತ್ವದ ನೆಲೆಗಟ್ಟಿನ ಸುರಪುರ ಸಂಸ್ಥಾನ ಹಾಗೂ ಶ್ರೀ ವೇಣುಗೋಪಾಲನ ವಿಶಿಷ್ಟ ಭಜನಾ ಪರಂಪರೆ ಕುರಿತು ಕನ್ನಡ ಸಾಹಿತ್ಯ ಪರಿಷತ್ ಹುಣಸಗಿ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ವಿಶೇಷ ಉಪನ್ಯಾಸ ನೀಡಿದರು.

ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಅವರು ದಿವಂಗತರ ಸೇವೆಯನ್ನು ಸ್ಮರಿಸಿದರು. ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು. ಡಾ.ಮಲ್ಲಿಕಾರ್ಜುನ ಕಮತಗಿ, ಮೇಘನಾಥ ಅಬ್ರಾಹಂ ಬೆಳ್ಳಿ, ಶರಣಬಸವ ಯಾಳವಾರ, ರಾಘವೇಂದ್ರ ಬಾಡಿಯಾಳ, ಲಕ್ಷö್ಮಣ ಗುತ್ತೇದಾರ್, ಶಕುಂತಲಾ ಜಾಲವಾದಿ, ಜಯಲಲಿತಾ ಪಾಟೀಲ್, ಪ್ರಕಾಶಚಂದ ಜೈನ್, ನಿಂಗನಗೌಡ ದೇಸಾಯಿ, ಶರಣಗೌಡ ಪಾಟೀಲ್ ಜೈನಾಪುರ, ಗಂಗಾಧರ ರುಮಾಲ, ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪಮಠ, ಕನಕಪ್ಪ ವಾಗಣಗೇರಾ, ಮಹಾಂತೇಶ ಗೋನಾಲ, ಶ್ರೀಶೈಲ್ ಯಂಕAಚಿ, ಗೋಪಣ್ಣ ಯಾದವ್, ಮಲ್ಲೇಶಿ ಕೋನಾಳ, ನರಸಿಂಹ ಬಾಡಿಹಾಳ, ಶ್ರೀಪಾದ ಗಡ್ಡದ, ರಮೇಶ, ರಾಘವೇಂದ್ರ ಬಕ್ರಿ ಇತರರಿದ್ದರು.

ಸಂಘದ ಉಪಾಧ್ಯಕ್ಷ ಜೆ.ಅಗಸ್ಟಿನ್ ಪ್ರಾಸ್ತಾವಿಕ ಮಾತನಾಡಿದರು. ಸಂಗೀತ ವಿದುಷಿ ನಿರ್ಮಲಾ ರಾಜಗುರು ಪ್ರಾರ್ಥಿಸಿದರು. ಶ್ರೀನಿವಾಸ ಜಾಲವಾದಿ ಸ್ವಾಗತಿಸಿದರು. ರಾಜಶೇಖರ ದೇಸಾಯಿ ನಿರೂಪಣೆ ಮಾಡಿದರು. ಉಪನ್ಯಾಸಕ ದೇವು ಹೆಬ್ಬಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net