ಆರ್‌ಆರ್ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ

Bescom
Published on

ಚಿತ್ರದುರ್ಗ:ಚಿತ್ರದುರ್ಗ ನಗರ ಉಪವಿಭಾಗ ವ್ಯಾಪ್ತಿಯಲ್ಲಿರುವ ಎಲ್ಲ ಕೃಷಿ ನೀರಾವರಿ ಪಂಪ್‌ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‌ಸೆಟ್ ವಿದ್ಯುತ್ ಆರ್‌ಆರ್ ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆ ಜೋಡಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾ ಹಕ ಇಂಜಿನಿಯರ್ ಎಚ್.ತಿಮ್ಮಣ್ಣ ತಿಳಿಸಿದ್ದಾರೆ. ಕೃಷಿ ಪಂಪ್‌ಸೆಟ್ ವಾರಸುದಾರರು ಮರಣ ಹೊಂದಿದ್ದರೆ,ಪ್ರಸ್ತುತ ಪಹಣಿಯಲ್ಲಿರುವ ಆಧಾರ್‌ಕಾರ್ಡ್,ಮೊಬೈಲ್‌ಸಂಖ್ಯೆ, ಹಿಂದಿನ ವಾರಸುದಾರರ ಮರಣ ಪ್ರಮಾಣ ಪತ್ರ, ಛಾಪಾಕಾಗದ ಹಾಗೂ ಪಹಣಿಯಲ್ಲಿ ಜಂಟಿ ಖಾತೆಯಾಗಿದ್ದರೆ ಉಳಿದವರ ಒಪ್ಪಿಗೆ ಪತ್ರ,ಕ್ರಯಪತ್ರದ ದಾಖಲೆಯನ್ನು ಸಮೀಪದ ಬೆಸ್ಕಾಂ ಶಾಖಾ ಕಚೇರಿ,ಸಂಬಂಧಿಸಿದ ಪವರ್‌ಮ್ಯಾ ನ್ ಅಥವಾ ಮೀಟರ್ ರೀಡರ್‌ಗಳಿಗೆ ಸಲ್ಲಿಸುವಂತೆ ಅವರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net