

ಚಿತ್ರದುರ್ಗ: ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಪತ್ರಿಕಾ ವಿತರಕರ ರಾಜ್ಯ ಮತ್ತು ಜಿಲ್ಲಾ ಒಕ್ಕೂಟದಿಂದ ಪತ್ರಿಕೋದ್ಯಮದಲ್ಲಿ ಬಂಗಾರದ ಪದಕ ಪಡೆದ ಆರ್. ಲಕ್ಷ್ಮಣ ಅವರನ್ನು ಬುಧವಾರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ವಿತರಕರ ಸಂಘದ ಜಿಲ್ಲಾಧ್ಯಕ್ಷ ಎಸ್.ತಿಪ್ಪೇಸ್ವಾಮಿ ಸನ್ಮಾನಿಸಿದರು.
ತುಮಕೂರು ಜಿಲ್ಲಾಧ್ಯಕ್ಷ ಚಲುವರಾಜ್, ಕಾರ್ಯದರ್ಶಿ ವಾಸುದೇವ್ ನಾದನೂರು, ದಾವಣಗೆರೆಯ ಕೃಷ್ಣಪ್ಪ, ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕಾಧ್ಯಕ್ಷರಾದ ಮಲ್ಲಿಕಾರ್ಜುನ, ನಾಗಣ್ಣ, ತಿಪ್ಪೇರುದ್ರಪ್ಪ, ಓಂಕಾರಪ್ಪ, ಪದಾಧಿಕಾರಿಗಳಾದ ಕುಬೇಂದ್ರಪ್ಪ, ಪ್ರಶಾಂತ, ನಾಗರಾಜ್ ಶೆಟ್ಟಿ, ತಿಪ್ಪೇಸ್ವಾಮಿ ಇಂಗಳದಾಳ್, ಸುನೀಲ್, ಕರಿಬಸಪ್ಪ ಬಣಕಾರ್, ಪ್ರಜ್ವಲ್, ಮಂಜುನಾಥ ನಾಯ್ಡು, ನಾಗರಾಜ್, ದುಗ್ಗಪ್ಪ, ಶ್ರೀಧರ್, ನಾಗೇಶ್, ರಾಜಪ್ಪ ಇತರರಿದ್ದರು.