

ಕೊಳ್ಳೇಗಾಲ: ಪಟ್ಟಣದ ಅಮ್ಮನ್ ಕಾಲನಿ (ಪೌರಕಾರ್ಮಿಕರ)ಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರಸಭೆ ಸದಸ್ಯ ರಾಘವೇಂದ್ರ ಮಾತನಾಡಿ, ಆರ್.ಧ್ರುವನಾರಾಯಣ ಅವರು ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿದ್ದರು. ಅವರ ನಿಧನದಿಂದ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ರಾಜು, ಪಿ.ಬಣ್ಣಾರಿ, ಆರ್ಮುಗ, ಕಂದಸ್ವಾಮಿ, ಜಿ.ಶಿವು, ಕಾರ್ತಿಕ್, ಎ.ರಮೇಶ್, ಪಳನಿಸ್ವಾನಿ, ರಜನಿಕಾಂತ್, ವಿಕ್ರಮ್, ಪ್ರಕಾಶ್, ಪಿ.ನಾಗರಾಜು, ಜಗನ್ನಾಥ್ ಮತ್ತಿತರಿದ್ದರು.