

ಹಾಸನ: ಬೇಲೂರು ತಾಲೂಕು ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚೀಕ್ಕನಹಳ್ಳಿ ಗ್ರಾಮದಲ್ಲಿ ಗಣೇಶ್ ಎಂಬ ವ್ಯಕ್ತಿಯ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧನಕ್ಕೆ ಮೂರು ತಂಡವನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ತಿಳಿಸಿದರು
ತಮ್ಮ ಕಚೇರಿಯಲ್ಲಿ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ 9:30ಯಿಂದ 10 ಗಂಟೆ ಸಮಯದಲ್ಲಿ ಗಣೇಶನನ್ನು ರೌಡಿಶೀಟರ್ ಮಧು ಹಾಗೂ ಆತನ ಸ್ನೇಹಿತ ರಘು ಎಂಬಾತ ಕರೆದುಕೊಂಡು ಹೋಗಿದ್ದಾರೆ, ಆನಂತರ ಇಸ್ಪೀಟ್ ಆಡುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ನಂತರ ಗಣೇಶನನ್ನು ಕೊಲೆ ಮಾಡಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಮೂವರು ಬಾಲ್ಯದಿಂದಲೂ ಸ್ನೇಹಿತರಾಗಿದ್ದು ಒಟ್ಟಿಗೆ ಇರುತ್ತಿದ್ದರು. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇವರ ನಡುವೆ ಹಣಕಾಸಿನ ವೈಷಮ್ಯ ಅಥವಾ ಬೇರೆ ಏನಾದರೂ ವ್ಯವಹಾರಗಳು ನಡೆದಿದ್ದವಾ ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ರಘು ಹಾಗು ಮಧು ನಾಪತ್ತೆಯಾಗಿದ್ದಾರೆ.