ಆರೋಪಿ ಸೆರೆ, 6 ಬೈಕ್ ವಶ

Published on

ಬಳ್ಳಾರಿ : ನಗರದ ವಿವಿಧಡೆ ಕಳ್ಳತನ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ, 2.10 ಲಕ್ಷ ರೂ. ಮೌಲ್ಯದ ಆರು ಬೈಕ್‌ಗಳನ್ನು ಶನಿವಾರ ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಕೊತ್ತಪಲ್ಲಿ ಗ್ರಾಮದ ನಿವಾಸಿ ಕುರುಬ ರಮೇಶ ಬಂಧಿತ. ಇಲ್ಲಿನ ಕಣೇಕಲ್ಲು ಬಸ್ ನಿಲ್ದಾಣದಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿ ವಿಚಾರಿಸಿದ ವೇಳೆ ಕಳೆದ ಒಂದು ವರ್ಷದಲ್ಲಿ ಆರು ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net