ಆರೋಪಗಳಿಗೆ ಉತ್ತರಿಸಿ, ಬೇರೆ ಮಾತ್ಯಾಕೇ?

dip--mp
Published on

ಚಿತ್ರದುರ್ಗ:ಸ್ವಾತಂತ್ರಾೃ ನಂತರದಲ್ಲಿ ಬ್ಯಾಂಕ್ ಮತ್ತು ಖಜಾನೆಯಿಂದ ಈ ಪ್ರಮಾಣದಲ್ಲಿ ಅವ್ಯವಹಾರ ಆಗಿದ್ದನ್ನು ನೋಡಿರಲಿಲ್ಲವೆಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದುಳಿದ ವರ್ಗದ ತಾವು ಮತ್ತೆ ಸಿಎಂ ಆಗಿದ್ದಕ್ಕೆ ಪ್ರತಿಪಕ್ಷಗಳಿಗೆ ಹೊಟ್ಟೆಕಿಚ್ಚೆಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಆರೋಪಗಳಿಗೆ ಉತ್ತರಿಸಬೇಕೆ ಹೊರತು ಬೇರೆ ಮಾತುಗಳನ್ನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಕೋಟ್ಯಂತರ ರೂ. ಅಕ್ರಮದ ಕುರಿತು ಇಡಿ ತನಿಖೆ ಆರಂಭಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಕೇಂದ್ರ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಎಸ್‌ಐಟಿ ವ್ಯಾಪ್ತಿ ಮೀರಿ ತನಿಖೆ ನಡೆಯಬೇಕಿದೆ ಎಂದರು.
ಹಗರಣದ ಮೊತ್ತವೂ ಭಾರೀ ಪ್ರಮಾಣದಲ್ಲಿ ಇರುವುದರಿಂದ ತನಿಖೆಗೆ ಇಡಿ ಎಂಟ್ರಿ ಆಗಿದ್ದು, ಯಾರೊಬ್ಬರು ಮಧ್ಯಸ್ಥಿಕೆ ವಹಿಸಿ ಮಾತನಾಡುವುದು ಸರಿಯಲ್ಲ. ನಿಷ್ಪಪಕ್ಷಪಾತವಾಗಿ ಇಡಿ ತನಿಖೆ ನಡೆಸಲಿದೆ. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿ. ಸರ್ಕಾರವೇ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ. ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಜು.15ರಂದು ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಸಿಎಂ ಆರ್ಥಿಕ ಸಲಹೆಗಾರ, ಬಸವರಾಜರಾಯರೆಡ್ಡಿ ಅವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತಂತೆ ಅರಿವಿದೆ. ಅವರಿಗೆ ಸಾಕಷ್ಟು ಅನುಭವವಿದೆ. ಖಜಾನೆಯಲ್ಲಿ ಇರುವುದನ್ನು ಹಂಚಿ ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳಬಾರದು. ಕಾಂಗ್ರೆಸ್ಸಿನ ಶೇ.50 ಶಾಸಕರು ಗ್ಯಾರಂಟಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎಂದರು.
ಎಸ್‌ಸಿ, ಎಸ್‌ಟಿ ಅನುದಾನ ಜನರ ಏಳಿಗೆಗೆ ಬಳಕೆಯಾಗಬೇಕು. ಬಡವರಿಗೆ ನೆರವಾಗುವುದನ್ನು ವಿರೋಧಿಸುತ್ತಿಲ್ಲ. ಆರ್ಥಿಕ ಹೊರೆ ಬಗ್ಗೆ ಎಚ್ಚರಿಸುತ್ತಿದ್ದೇವೆ. ಆದರೆ, ದಪ್ಪ ಚರ್ಮದ ಈ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net