

ಬೆಳಗಾವಿ: ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಈಚೆಗೆ ವಿವಿಧ ಶಾಲಾ ವಿದ್ಯಾರ್ಥಿಗಳು ನಗರದ ಅರಿಹಂತ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗೌರವಿಸಿ ಕೃತಜ್ಞತೆ ಸಲ್ಲಿಸಿದರು.
ಅರಿಹಂತ ಆಸ್ಪತ್ರೆಯ ಎಂಡಿ, ಸಿಇಒ ಡಾ.ಎಂ.ಡಿ.ದೀಕ್ಷಿತ್ ಮಾತನಾಡಿ, ಮಕ್ಕಳೇ ದೇಶದ ಭವಿಷ್ಯ. ಅವರು ಹೆಚ್ಚಾಗಿ ಹೋರಾಂಗಣ ಆಟಗಳನ್ನು ಆಡಬೇಕು. ಶಾರೀರಿಕವಾಗಿ ಸಕ್ರೀಯರಾಗಿ ಹಾಗೂ ಆರೋಗ್ಯಕರ ಜೀವನದತ್ತ ಗಮನ ಹರಿಸಬೇಕು.
ಆರೋಗ್ಯವಂತ ದೇಹವೇ ಸುಸ್ಥಿತ ಮನಸ್ಸಿಗೆ ದಾರಿ ಮಾಡುತ್ತದೆ. ಆರೋಗ್ಯವಂತ ಜನಾಂಗವೇ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದರು.
ಮಕ್ಕಳಲ್ಲಿ ಕೃತಜ್ಞತೆ, ಸೇವಾ ಮನೋಭಾವ ಮತ್ತು ಸಹಾನುಭೂತಿಯಂತಹ ಮೌಲ್ಯ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮ ಸಹಕಾಯಾಗಿವೆ ಎಂದು ಹೇಳಿದರು.