

ಚಿಕ್ಕೋಡಿ: ಆರೋಗ್ಯ ನಮ್ಮ ಮಾನವೀಯ ಹಕ್ಕು ಮತ್ತು ಸಂಪತ್ತು ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಹುಲ್ ಭಾಗಚಂದಾನಿ ಹೇಳಿದರು.
ತಾಲೂಕಿನ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನದ ಅಂಗವಾಗಿ ಆಯೋಜಿಸಿದ್ದ್ದ ಕಾರ್ಯಕ್ರಮದಲ್ಲಿ ಎಚ್‌ಐವಿ ರೋಗದ ಬಗ್ಗೆ ಮಾತನಾಡಿ, ರಾಜ್ಯದಲ್ಲಿ 3.98 ಲಕ್ಷ ಹಾಗೂ ಚಿಕ್ಕೋಡಿಯಲ್ಲಿ 3412 ಎಚ್‌ಐವಿ ಪ್ರಕರಣಗಳು ದಾಖಲಾಗಿವೆ ಎಂದರು. ರೋಗದ ಲಕ್ಷಣ ತಿಳಿದ ತಕ್ಷಣ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಈ ರೀತಿ ಮಾಡದೆ. ಸರ್ಕಾರವು ಉಚಿತವಾಗಿ ನೀಡುತ್ತಿರುವ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ.ಡಿ.ಬಿ.ಸೊಲ್ಲಾಪುರೆ, ಡಿ.ಎಸ್.ರವಟೆ, ಪಿ.ಸಿ.ಚವ್ಹಾಣ, ಡಿ.ಬಿ.ಪಾಟೀಲ, ಎಸ್.ಬಿ. ನಾಗರಾಳೆ, ಎಸ್.ಬಿ.ಖಾಜಿ ಇತರರಿದ್ದರು. ವಿ.ಎಸ್.ಬಿಳಗಿ ಸ್ವಾಗತಿಸಿದರು. ಪ್ರತಿಷ್ಠಾ ನಿರೂಪಿಸಿದರು. ಕವಿತಾ ಭೋವಿ ವಂದಿಸಿದರು.