ಆರೋಗ್ಯವಂತರಾಗಿರಲು ಪೌಷ್ಟಿಕಾಂಶ ಅಗತ್ಯ

7
Published on

ತಲ್ಲೂರ: ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ರೋಗಮುಕ್ತ ಸಮಾಜ ನಿರ್ಮಿಸಬೇಕು ಎಂದು ಗ್ರಾಪಂ ಅಧ್ಯೆ ಪ್ರೇಮಾ ಢಮ್ಮಣಗಿ ಹೇಳಿದರು.

ಸಮೀಪದ ಆಲದಕಟ್ಟಿ ಕೆ.ಎಂ ಗ್ರಾಮದ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರಿ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂ ಸವದತ್ತಿ ಇವರ ಆಶ್ರಯದಲ್ಲಿ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪೌಷ್ಟಿಕ ಆಹಾರ ಅಗತ್ಯ ಎಂದರು.

ಯರಗಟ್ಟಿ ೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್​.ಗಂಜಿ ಮಾತನಾಡಿ, ಸ್ಥಳಿಯವಾಗಿ ಸಿಗುವ ಸೊಪ್ಪು, ತರಕಾರಿ, ಬೇಳೆಕಾಳು ಸೇರಿದಂತೆ ದ್ವಿದಳ ಧಾನ್ಯಗಳು, ಹಣ್ಣುಗಳನ್ನು ಸೇವಿಸಿ ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಬೇಕು ಎಂದರು.

ಜ್ಞಾನವಿಕಾಸ ಕೇಂದ್ರದ ಸಮನ್ವಯಧಿಕಾರಿ ನಿಶಾ ನಾಯ್ಕ, ವಲಯ ಮೇಲ್ವಿಚಾರಕ ನಾಗೇಶ ನಾಯ್ಕ, ಗದಿಗೆವ್ವ ಗುರನಗೌಡ್ರ, ನಾಗಪ್ಪ ಎನ್​., ಫಕೀರವ್ವ ಪಡೆಪ್ಪನವರ, ಅಜ್ಜಪ್ಪ ಹಲಗಲಿ, ಶೋಭಾ ಸಣ್ಣಗೌಡ್ರ, ರಾಜೇಶ್ವರಿ ಚವಡಪ್ಪನವರ, ಬಸವ್ವ ಬೆನಕಟ್ಟಿ, ಮಿನಾ ಪಡೆಪ್ಪನವರ, ಜಯಶ್ರಿ ನಂಜನವರ, ಫಕೀರವ್ವ ಸತ್ಯನಾಯ್ಕರ, ಸುವರ್ಣಾ ಹಿರೇಮಠ, ಮಹಾದೇವಿ ಸಣ್ಣಗೌಡ್ರ, ಮಂಜುಳಾ ಚವಡಪ್ಪನವರ, ಭಾರತಿ ಯರಗಟ್ಟಿ, ಶ್ರೀದೇವಿ ಬಡಿಗೇರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net