ಆರೋಗ್ಯವಂತ ಮಹಿಳೆಯಿಂದ ಸಶಕ್ತ ಸಮಾಜ ನಿರ್ಮಾಣ

6Anand2
Published on

ಆರೋಗ್ಯವಂತ ಮಹಿಳೆಯಿಂದ ಸಶಕ್ತ ಸಮಾಜ ನಿರ್ಮಾಣ

|ಕುಲಸಚಿವ ಸಂತೋಷ ಕಾಮಗೌಡರ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

"ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನವು ಮಹಿಳೆಯರ ಆರೋಗ್ಯದ ಮಹತ್ವ ಮತ್ತು ಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಆರೋಗ್ಯವಂತ ಮಹಿಳೆಯಿಂದ ಮಾತ್ರ ಸಶಕ್ತ ಸಮಾಜ ನಿರ್ಮಾಣ ಸಾಧ್ಯವೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಸಚಿವ ಸಂತೋಷ ಕಾಮಗೌಡ ಅಭಿಪ್ರಾಯ ಪಟ್ಟರು.

ತಾಲೂಕಿನ ಹೊಸ ವಂಟಮೂರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ ಮತ್ತು ಮಹಿಳಾ ಸಬಲೀಕರಣ ಕೋಶದ ಸಹಯೋಗದಲ್ಲಿ ಈಚೆಗೆ ಜರುಗಿದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

2047 ರ ವಿಕಸಿತ ಭಾರತ ಕಾರ್ಯಕ್ರಮದ ದೃಷ್ಟಿಯಿಂದ ಆರೋಗ್ಯಕರ ಸಮಾಜ ನಿರ್ಮಿಸಬೇಕಿದೆ.ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಆರೋಗ್ಯ ತಪಾಸಣೆ ಶಿಬಿರ ಮಹತ್ವದ ಪಾತ್ರ ಹೊಂದಿದೆ ಎಂದರು.

ರಾಷ್ಟ್ರೀಯ ಕಾರ್ಯಕ್ರಮದ ಅನುಷ್ಠಾನವು ತಳಮಟ್ಟದಲ್ಲಿ ಕಾರ್ಯಗತಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಮಧುಮೇಹ, ಅಧಿಕ ರಕ್ತದೊತ್ತಡ ರಕ್ತಹೀನತೆ ಮತ್ತು ಕ್ಷಯರೋಗ ತಪಾಸಣೆ ನಡೆಸಲಾಯಿತು.

ಪ್ರೊ.ಡಿ.ಎನ್.ಪಾಟೀಲ, ಸಿಂಡಿಕೇಟ್ ಸದಸ್ಯೆ ಪ್ರೊ.ವಿಜಯಲಕ್ಷ್ಮಿ ಶೀಗೇಹಳ್ಳಿ, ಡಬ್ಲ್ಯುಇಸಿ ನಿರ್ದೇಶಕಿ ಪ್ರೊ.ಚಂದ್ರಿಕಾ, ಡಾ.ಯೋಗಿತಾ ಪೋತದಾರ, ಡಾ.ಅಪ್ಪಾಸಾಹೇಬ ಕೋಣೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net